ಪ್ರಜಾಪ್ರಭುತ್ವ ದಿನಾಚರಣೆ
ನವಲಗುಂದ,ಸೆ16: ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ,ಸಹೋದರತೆ ಮೌಲ್ಯಗಳು ಪ್ರಜಾಪ್ರಭುತ್ವದಂತ ರಾಜಕೀಯ ವ್ಯವಸ್ಥೆ ಮೂಲಕ ಮಾತ್ರ ಸಾಕರಗೊಳ್ಳಲು ಸಾಧ್ಯ ಜೊತೆಗೆ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದು ಸಾಹಿತಿ ಡಾ ಸುಗುಣ ಡಿ ವಿ ಹೇಳಿದರು.
ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ ಎಂ ಬಿ ಬಾಗಡಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಸಾಧನೆಗಳನ್ನು ನೆನೆದು ಸಂವಿಧಾನಾತ್ಮಕ ಅಂಶಗಳನ್ನು ಪಾಲಿಸಲು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಡಾ ಸಂತೋಷ ಹುಬ್ಬಳ್ಳಿ ಸಂವಿಧಾನ ಪೀಠಿಕೆ ವಾಚಿಸಿದರು, ವಿನಾಯಕ ಮಿರಜಕರ ಸ್ವಾಗತಿಸಿದರು, ನಾಗರತ್ನ ಕುರಡೇಕರ ವಂದಿಸಿದರು, ಸವಿತಾ ಚಿಕ್ಕಣ್ಣವರ ನಿರೂಪಿಸಿದರು. ಬಸವರಾಜ ಸೂಡಿ ಮಾನವ ಸರಪಣಿಯ ನೇತೃತ್ವ ವಹಿಸಿದ್ದರು.