ಶಿಕ್ಷಕರನ್ನು ಗೌರವಿಸುವಲ್ಲಿ ನಾಡಿಗೆ ಭವಿಷ್ಯ
ಧಾರವಾಡ,ಸೆ16: ಎಲ್ಲಿ ಶಿಕ್ಷಕರನ್ನು ಗೌರವಿಸಲಾಗುತ್ತದೆಯೋಅಲ್ಲಿ ನಾಡಿಗೆ ಭವಿಷ್ಯವಿದೆ. ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಗೆ, ಸಮಾಜಕ್ಕೆಜ್ಞಾನದತುತ್ತು, ಅನುಭವದ ಬುತ್ತಿ ನೀಡುತ್ತಾನೆ. ಜ್ಞಾನಕವಚವಾದರೆ, ಅನುಭವ ಹೂರಣ. ಶಿಕ್ಷಕರಿಗೆ ಪಗಾರವಷ್ಟೆಅಲ್ಲಆರೋಗ್ಯದ ವಿಮೆಯನ್ನೂ ಮಾಡಿಕೊಡಬೇಕುಎಂದು ಹಿರಿಯ ಸಾಹಿತಿ ಹಾಗೂ ಕ.ವಿ.ವ.ಸಂಘದಉಪಾಧ್ಯಕ್ಷರಾದ ಪ್ರೊ.ಮಾಲತಿ ಪಟ್ಟಣಶೆಟ್ಟಿಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀಮತಿ ಶಿವಗಂಗಾ ಮತ್ತು ಶ್ರೀ ವೀರಪ್ಪರಾಮಾಪೂರದತ್ತಿ ಅಂಗವಾಗಿ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ-2024 ಪ್ರದಾನ ಹಾಗೂಹೊಸ ಪರಿಪಾಠ’ ಮತ್ತು ನೇಹಾರಾಣಿ ಕಥೆಗಳು’ ಕೃತಿಗಳ ಬಿಡುಗಡೆ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದಅವರು, ನಿವೃತ್ತರಾದವರನ್ನುಕಡೆಗಣಿಸುವುದು ಸಲ್ಲದು.ನಿವೃತ್ತರಲ್ಲಿಅಪಾರ ಅನುಭವಗಳಿರುತ್ತವೆ. ನಮ್ಮ ಆಡಳಿತ ವಲಯಗಳಲ್ಲಿ ನಿವೃತ್ತ ಶಿಕ್ಷಕರ ಪ್ರತಿನಿಧಿಗಳು ಇರಬೇಕು.ಅವರ ಸಲಹೆಗಳನ್ನು ಪಡೆಯಬೇಕು.ಎಲ್ಲ ಸೇವಾ ವಲಯಗಳ ಸಲಹಾ ಸಮಿತಿಗಳಲ್ಲಿ ನಿವೃತ್ತ ಶಿಕ್ಷಕರನ್ನು ಬಳಸಿಕೊಳ್ಳಬೇಕು.ಮನೆಯಲ್ಲಿಅಜ್ಜ, ಅಜ್ಜಿಇದ್ದರೆಅದೇಅನುಭವ ಮಂಟಪಇದ್ದಂತೆ.ಅವರು ಮನೆಯಲ್ಲಿ ಬದುಕಿನ ಅನುಭವಗಳನ್ನು ಮುಂದಿನ ಪೀಳಿಗೆಗೆ ಹರಿಯಬಿಡುತ್ತಾರೆಎಂದರು.
ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದಆಕಾಶವಾಣಿ ವಿಶ್ರಾಂತ ನಿರ್ದೇಶಕರಾದಡಾ.ಬಸು ಬೇವಿನಗಿಡದ, ನಮ್ಮದೇಶ ಬಹುತ್ವದೇಶ. ನಾವೆಲ್ಲಅಣ್ಣ-ತಮ್ಮಂದಿರರೀತಿ ಬಾಳಬೇಕು.ಇದು ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯವಿದೆ.ಅದೇಅಜ್ಜ ಹಾಕಿದಆಲದ ಮರಕ್ಕೆಜೋತು ಬೀಳುವದಲ್ಲ. ಇಂದಿನ ಮಕ್ಕಳು ಹೊಸ, ಹೊಸ ಸಂಗತಿಗಳಿಗೆ ಆಕರ್ಷಿತರಾಗುತ್ತಿದ್ದಾರೆ.ಅವರಿಗೆ ಬೇಕಾಗಿರುವುದು ಮತೀಯಚಿಂತನೆಅಲ್ಲ. ಹೊಸ ಪರಿಪಾಠ, ನೂತನ ಪರಂಪರೆಯನ್ನು ಹಿರಿಯರಾದ ನಾವು ಕಟ್ಟಿಕೊಡಬೇಕುಎಂದು ಹೇಳಿದರು.
ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಾ.ಶಿ.ಇಲಾಖೆಯ ಜಿಲ್ಲಾಯೋಜನಾ ಸಮನ್ವಯಾಧಿಕಾರಿಎಸ್. ಎಂ. ಹುಡೇದಮನಿ ಈ ಪುರಸ್ಕಾರ ನನಗೆ ಪ್ರೇರಣೆ, ಧೈರ್ಯತುಂಬಿದೆ. ಇಲಾಖೆ ಕಾರ್ಯದಲ್ಲಿ ನನ್ನಲ್ಲಿ ಹೊಸ ಚೈತನ್ಯತುಂಬಿದ್ದೀರಿಎಂದು ಹೇಳಿದರು.ಶಿಕ್ಷಕಿ ತಹಮೀನಾ ಸೈಯದ ಮಾತನಾಡಿ, ಧಾರವಾಡದ ನೆಲದಲ್ಲಿದೊಡ್ಡ ಶಕ್ತಿ ಇದೆ.ಅದು ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದರು.
ಶಿಕ್ಷಕ ಸಾಹಿತಿ ಶ್ರೀಧರ ಗಸ್ತಿ, ಶಿಕ್ಷಕ ಸಾಹಿತಿಡಾ. ಲಿಂಗರಾಜರಾಮಾಪೂರಅವರ ಹೊಸ ಪರಿಪಾಠ' ಹಾಗೂ ಅವರ ಮಗಳಾದ ಕು. ನೇಹಾ ರಾಮಾಪೂರಅವರನೇಹಾರಾಣಿ ಕಥೆಗಳು’ ಪುಸ್ತಕ ಪರಿಚಯ ಮಾಡಿದರು.
ಸಂಘದಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.ಕು.ನೇಹಾ, ನವ್ಯ, ನಂದೀಶ ವಚನ ಗಾಯನ ನೆರವೇರಿಸಿದರು.ದತ್ತಿದಾನಿ ಡಾ. ಲಿಂಗರಾಜರಾಮಾಪೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದಕೋಶಾಧ್ಯಕ್ಷ ಸತೀಶತುರಮರಿ, ಕಾರ್ಯಕಾರಿ ಸಮಿತಿ ಸದಸ್ಯರಾದಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ ವ್ಹಿ. ಎನ್. ಕೀರ್ತಿವತಿ, ಪ್ರಮೀಳಾ ಜಕ್ಕಣ್ಣವರ, ಜಗದೀಶ ಬರದೇಲಿ, ಚಂದ್ರಶೇಖರಅಮಿನಗಡ ಹಾಗೂ ಶಿಕ್ಷಣ ಇಲಾಖೆಯಅಧಿಕಾರಿ ಬಳಗ, ರಾಮಾಪೂರ ಹಾಗೂ ಹುಡೇದಮನಿ ಪರಿವಾರದವರು ಸೇರಿದಂತೆಅನೇಕರು ಭಾಗವಹಿಸಿದ್ದರು.