ಕೊಟ್ಟೂರು ಪಾದಯಾತ್ರಿಗಳಿಗೆ ಹಣ್ಣು, ಉಪಹಾರ, ಅನ್ನದಾಸೋಹ ಹಾಗೂ ವೈದ್ಯಕೀಯ ಉಪಚಾರ.

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.2;ಕೊಟ್ಟೂರು ಶ್ರೀ ಗುರುಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಪಟ್ಟಣದಲ್ಲಿ ಶನಿವಾರ ವಿವಿಧ ಸಂಘ, ಸಂಸ್ಥೆಗಳಿAದ ಹಣ್ಣು, ಉಪಹಾರ, ಊಟ, ಔಷಧೋಪಚಾರ, ಹೀಗೇ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಭಕ್ತಿ ಮೇರೆದಿದ್ದಾರೆ.ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಸೇರಿದಂತೆ ಇತರೆ ತಾಲೂಕು, ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಹರಪನಹಳ್ಳಿ-ಕೊಟ್ಟೂರು ದಾರಿಯುದ್ದಕ್ಕೂ ಸಂಘ, ಸಂಸ್ಥೆಯವರು ತಮ್ಮದೆಯಾದ ಸೇವೆಯನ್ನು ಸಲ್ಲಿಸಿದರು.ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಅನ್ನದಾಸೋಹ, ವಿವಿಧ ಹಣ್ಣುಗಳು, ತಂಪು ಪಾನಿಯಗಳನ್ನು ನೀಡಲಾಯಿತು. ಸಂಜೆ ದಾಸೋಹದ ವ್ಯವಸ್ಥೆ ಮುಂದುವರೆದಿತ್ತು. ತೆಗ್ಗಿನಮಠದಲ್ಲೂ ಸಹ ಅನ್ನದಾಸೋಹ ಹಾಗೂ ವಿಶ್ರಾಂತಿ ವ್ಯವಸ್ಥೆಗೆ ಆಯೋಜಿಸಲಾಗಿತ್ತು.ಆರ್ಯವೈಶ್ಯ ಮಂಡಳಿ ಸಂಘದಿAದ ಪಾದಯಾತ್ರಿಯಲ್ಲಿ ಆಗಮಿಸಿದ ಭಕ್ತರಿಗೆ ಔಷಧಿಗಳನ್ನು ಹಾಗೂ ಅವರನ್ನು ಉಪಚರಿಸುವ ಮೂಲಕ ಗುರುಬಸವೇಶ್ವರ ಸ್ವಾಮಿಗೆ ಭಕ್ತಿಯನ್ನು ಸಮರ್ಪಿಸಿದರು. ಆರ್ಯವೈಶ್ಯ ಸಮಾಜದ ಅಧ್ಯಕ್ಷ ಮುದುಗಲ್ ನಾಗರಾಜ ಶೆಟ್ರು, ಉಪಾದ್ಯಕ್ಷ ಬಿ.ಎಸ್.ರವಿಶಂಕರ್, ಕಾರ್ಯದರ್ಶಿ ನಟೇಶಕುಮಾರ, ಉಪಕಾರ್ಯದರ್ಶಿ ಕಡ್ಲಿ ನಟರಾಜ, ಖಜಾಂಚಿ ಪೆಂಡಕೂರು ಶ್ರೀಧರ, ಕಡ್ಲಿ ರಾಘವೇಂದ್ರ ಶೆಟ್ಟಿ, ಹೆಚ್.ಕೆ.ಬದರಿನಾರಾಯಣ, ಜಿ.ಕೃಷ್ಣಮೂರ್ತಿ, ಬಂಕಾಪುರ ಸತೀಶ, ಬಿ.ಮೋಹನಕುಮಾರ, ಶಂಕರ, ಗಂಗಾವತಿ ಮನೋಹರ, ಪಿ.ಮುರುಳಿ, ಮಹಿಳೆಯರು ಸೇರಿದಂತೆ ಇತರರು ಇದ್ದರು.ಅನ್ನ ಸಂತರ್ಪಣೆ : ಕೊಟ್ಟೂರಿಗೆ ಪಾದ ಯಾತ್ರೆಗೆ ಹೊರಟಿದ್ದು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಹಾವೇರಿ, ಶಿಗ್ಗಾಂ, ತಾಲೂಕಿನ ಹೊಸರಿತ್ತಿ, ಅತ್ತಿಗೇರಿ, ಮೇಲ್ಮುರಿ, ಹಂದಿಗನೂರು, ಶಿಶುವಿನಹಾಳು ಮುಂತಾದ ದೂರದ ಗ್ರಾಮಗಳಿಂದ ಆಗಮಿಸಿದ ಭಕ್ತರು ಕೊಟ್ಟೂರು ಗುರು ಬಸವೇಶ್ವರ ರಥೋತ್ಸವಕ್ಕೆ ತೆರಳುವ ಭಕ್ತಾದಿಗಳಿಗೆ ಪಟ್ಟಣದ ಕೊಟ್ಟೂರು ರಸ್ತೆಗೆ ಹೊಂದಿಕೊAಡಿರುವ ನಿವಾಸದಲ್ಲಿ ಸ್ಥಳೀಯ ನಿವೃತ್ತ ಬಿಎಸ್‌ಎನ್‌ಎಲ್ ನೌಕರ ಕೆ.ಆರ್.ಸುಧಾಕರ ದಂಪತಿಗಳು ಆಯೋಜಿಸಿದ್ದ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿ, ಕಾರ್ಯದರ್ಶಿ ಟಿ.ಎಂ.ಚAದ್ರಶೇಖರಯ್ಯ, ಪುರಸಭೆ ಸದಸ್ಯ ಎಂ.ವಿ.ಅAಜಿನಪ್ಪ, ಸೇರಿದಂತೆ ಇತರರು ಇದ್ದರು.