ಶೋಷಿತರ ಗಟ್ಟಿ ಧ್ವನಿಯಾಗಿದ್ದ ಕೆ.ಶಿವರಾಮ್ –ಬಾಡದ ಆನಂದರಾಜ್
ದಾವಣಗೆರೆ. ಮಾ.೨; ಕೆ.ಶಿವರಾಮ್ ರವರು ಒಬ್ಬ ಜಿಲ್ಲಾಧಿಕಾರಿಯಾಗಿ ಹೇಗೆ ಜನಸ್ನೇಹಿ ಅಧಿಕಾರಿಯಾಗಿ ಇರಬೇಕು ಎಂಬುದನ್ನ  ದಾವಣಗೆರೆಯಲ್ಲಿ ತೋರಿಸಿಕೊಟ್ಟ ಶೋಷಿತರ ಗಟ್ಟಿಧ್ವನಿ ಎಂದು‌ಬಾಡದ ಆನಂದರಾಜ್ ಹೇಳಿದ್ದಾರೆ.ರಂಗುರಂಗಿನ ಸದಾ ಲವಲವಿಕೆಯಿಂದ ಆಡಳಿತ ಮಾಡಿದ ಅಧಿಕಾರಿ.ರಾಜ್ಯದಲ್ಲೇ ಅತೀ ಹೆಚ್ಚು ಆಶ್ರಯ ಮನೆಗಳನ್ನ ಛಲದಂಕ ಮಲ್ಲನಾಗಿ ಕಟ್ಟಿಸಿ ರಾಜ್ಯಕ್ಕೆ ಮಾದರಿಯಾದ ಅಧಿಕಾರಿ.ಜಿಲ್ಲಾಧಿಕಾರಿ ಎಂದರೆ ಎಸಿ ರೂಮಿನಲ್ಲಿರುತ್ತಾರೆ ಎಂಬುದನ್ನ ಅಕ್ಷರಶಃ ಸುಳ್ಳಾಗಿಸಿದ ಅಧಿಕಾರಿ.ರಾಜ್ಯದಲ್ಲೇ ಪ್ರಥಮ ಬಾರಿಗೆ “ನಮ್ಮ ನಾಡು” ಎಂಬ ಅಭಿಯಾನ ಆರಂಭಿಸಿ ಜಿಲ್ಲಾಡಳಿತದ ಅಧಿಕಾರಿಗಳನ್ನ ನಮ್ಮ ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ಬೇಟಿ ಮಾಡಿಸಿದ ಹೆಮ್ಮೆಯ ಅಧಿಕಾರಿ.ಮೂಢನಂಬಿಕೆ. ಅನಿಷ್ಠಪದ್ದತಿಗಳಿಗೆ ಮತ್ತು ಬಾಲ ಕಾರ್ಮಿಕರ ಪದ್ದತಿಯನ್ನ ನಿರ್ದಾಕ್ಷಿಣ್ಯವಾಗಿ ತಡೆಗಟ್ಟಿದ ನಮ್ಮ ಹೆಮ್ಮೆಯ ಅಧಿಕಾರಿ.ಮಾತುಗಳೇ ಸಾಧನೆಗಳಾಗದೇ ಸಾಧನೆಗಳೇ ಸದಾ ಮಾತನಾಡುವಂತೆ ಸಾಧಸಿದ ಮೆಚ್ಚಿನಾಧಿಕಾರಿ.ದಾವಣಗೆರೆ ಜಿಲ್ಲೆಯಾಗಿ ಹೊಸದರಲ್ಲಿ ಜನಮೆಚ್ಚಿದ ಜಿಲ್ಲಾಧಿಕಾರಿ ಎಂಬ ಹಣೆಪಟ್ಟ ಕಟ್ಟಿಕೊಂಡ ಅಧಿಕಾರಿ.ಒಟ್ಟಾರೆ ಧ್ವನಿಯಿಲ್ಲದವರಿಗೆ ಗಟ್ಟಿಧ್ವನಿಯಾಗಿದ್ದರು.ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಮನದಾಳದಿಂದ ಕರೆಯಲ್ಪಡುವ ಅಚ್ಚುಮೆಚ್ಚಿನ ಅಧಿಕಾರಿ.ಕೆ.ಶಿವರಾಮ್ ರವರ ಸಾವಿನ ಸುದ್ದಿ ದಿಗ್ಗಭ್ರಮೆಯಾಗಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗಕ್ಕೆ ದುಃಖ ಭರೆಸುವ ಶಕ್ತಿ ಆ ಬಸವಣ್ಣ ನೀಡಲಿ ಎಂದಿದ್ದಾರೆ.