ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನ ಫರೀದ್‌ರಿಂದ ಸಚಿವ ಎನ್.ಎಸ್.ಬೋಸರಾಜುರಿಗೆ ಸನ್ಮಾನ
ರಾಯಚೂರು.ಮಾ.೦೨- ಜಿಲ್ಲಾ ವಕ್ಫ್ ಬೋರ್ಡ್ ನ ನೂತನ ಅದ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೌಲಾನಾ ಫರೀಧ್ ಖಾನ್ ಅವರು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ್ ಅವರನ್ನು ಭೇಟಿ ಮಾಡಿ, ಸನ್ಮಾನಿಸಿ, ಸಿಹಿ ಹಂಚಿದರು.
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿರುವ ಸಚಿವರ ನಿವಾಸಕ್ಕೆ ಆಗಮಿಸಿ, ಸಚಿವರಿಗೆ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರಿಗೆ ಸನ್ಮಾನಿಸಿ, ಸಿಹಿ ಹಂಚಿದರು. ನಂತರ ಸಚಿವರಾದ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಅವರು ರಾಯಚೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೌಲಾನ ಫರೀದ್ ಖಾನ್ ಅವರಿಗೆ ಪುಷ್ಪಗುಚ್ಛ ನೀಡಿ ಶುಭ ಕೋರಿದರು.