ಮೂರ್ತಿ ಸಂಶೋಧನಾ ಕೇಂದ್ರ ಉದ್ಘಾಟನೆ
ಬೆಂಗಳೂರು,ಮಾ೨:ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಸಂಶೋಧನೆಯ ಮೂಲಭೂತ ತತ್ತ್ವಕ್ಕೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿಗೆ ಪೂರಕವಾಗಿ ಬೆಂಗಳೂರಿನ ಗೀತಂ ಭಾಷಾಂತರ ಉಪಕ್ರಮಗಳ ಸಂಶೋಧನಾ ಕೇಂದ್ರದ ಬಹುಶಿಸ್ತೀಯ ಸಂಶೋಧನಾ ಕೇಂದ್ರವನ್ನು ಉದ್ಘಾಟನೆ ಮಾಡಿದೆ.
ಹಗುರ ಯುದ್ಧ ವಿಮಾನ (ಐಅಂ) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಮತ್ತು ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ, ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್, ಗೀತಂ ಕುಲಪತಿ ಡಾ.ವೀರೇಂದ್ರ ಸಿಂಗ್ ಚೌಹಾಣ್, ಉಪಕುಲಪತಿ ಪ್ರೊ. ದಯಾನಂದ ಸಿದ್ದವಟ್ಟಂ ಮತ್ತು ಬೆಂಗಳೂರು ಕ್ಯಾಂಪಸ್ ನ ಪ್ರೊ ವಿಸಿ ಪ್ರೊ.ಕೆಎನ್‌ಎಸ್ ಆಚಾರ್ಯ ಸೇರಿದಂತೆ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಖ್ಯಾತ ಎಂಜಿನಿಯರ್, ಶಿಕ್ಷಣ ತಜ್ಞ ಮತ್ತು ಹಗುರ ಯುದ್ಧ ವಿಮಾನ (ಐಅಂ) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ ಅವರು ಮಾತನಾಡಿ, “ಸುಸ್ಥಿರ ತಂತ್ರಜ್ಞಾನವು ಹೇಗೆ ಬೆಳೆಯಬೇಕೆಂಬುದರ ಬಗ್ಗೆ ಸಂಪೂರ್ಣ ಮರುಚಿಂತನೆಯನ್ನು ನಡೆಸುವ ಅಗತ್ಯವಿದೆ ಎಂದರು.
ಗೀತಂನ ಬೆಂಗಳೂರು ಕ್ಯಾಂಪಸ್ ನ ಪ್ರೊವಿಸಿ ಪ್ರೊ.ಕೆಎನ್‌ಎಸ್ ಆಚಾರ್ಯ ಅವರು ಮಾತನಾಡಿ, “ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ಣಾಯಕ ಅಂಶಗಳಾಗಿವೆ ಎಂದರು.
ಉಪಕುಲಪತಿ ಪ್ರೊ.ದಯಾನಂದ ಸಿದ್ದವಟ್ಟಂ ಅವರು ಮಾತನಾಡಿ, “ಖ್ಯಾತನಾಮ ವಿದ್ವಾಂಸರು, ಯುವ ಸಂಶೋಧಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತರಶಸ್ತೀಯ ಸಂಶೋಧನಾ ಸಂಸ್ಕೃತಿಯನ್ನು ರಚಿಸುವ ಗುರಿಯನ್ನು ಒUಖಖಿI ಹೊಂದಿದೆ. ಸ್ಥಳೀಯ ವಿಷಯವನ್ನು ಬಳಸಿಕೊಂಡು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ ಎಂದರು.