ಕೃಷ್ಣಾ ಸೇತುವೆ ಮೇಲೆ ಸಂಚಾರ ಆರಂಭ
(ಸಂಜೆವಾಣಿ ವಾರ್ತೆ)
ರಾಯಚೂರು, ಮಾ. ೨-ಕೃಷ್ಣಾ ಸೇತುವೆಯನ್ನು ಸಂಸದ ರಾಜ ಅಮರೇಶ್ವರ ನಾಯಕ ಸೂಚನೆ ಮೇರೆಗೆ ವಾಹನಗಳಿಗೆ ಸಂಚರಿಸಲು ನಿನ್ನೆಯಿಂದ ಅವಕಾಶ ಮಾಡಿಕೊಡಲಾಗಿದೆ ಎಂದು ರೈಲ್ವೆ ಮಂಡಳಿ ಸಲಹಾ ಸಮಿತಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.
ಹಳೆಯದಾದ ಕೃಷ್ಣಾ ಸೇತುವೆ ಮೇಲ್ಭಾಗದ ರಸ್ತೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಳೆದ ೪೭ ದಿನಗಳಿಂದ ದುರಸ್ಥಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಫೆ. ೨೯ಕ್ಕೆ ದುರಸ್ಥಿ ಕಾಮಗಾರಿ ಪೂರ್ಣಗೊಂಡಿದೆ. ಭಾರವಾದ ವಾಹನಗಳು ಸೇತುವೆ ಮೇಲೆ ಸಂಚರಿಸುವುದರಿಂದ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ಬಾಬುರಾವ್ ತಿಳಿಸಿದ್ದಾರೆ.
ಶಕ್ತಿನಗರ ಕೃಷ್ಣಾ ಸೇತುವೆ ಅಂದಾಜು ೭೫೦ ಮೀಟರ್ ಉದ್ದವಿದೆ. ೮೦ ವರ್ಷ ಹಳೆಯದಾದ ಈ ಸೇತುವೆ ರಾಷ್ಟ್ರೀಯ ಹೆದ್ದಾರೆ ೧೬೭ರಲ್ಲಿ ಬರಲಿದೆ. ಈ ಸೇತುವೆ ಮೂಲಕ ಹೈದರಾಬಾದ್ ಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಸೇತುವೆ ಹಳೆಯದಾದ್ದರಿಂದ ಅತಿ ಹೆಚ್ಚು ಭಾರದ ವಾಹನಗಳನ್ನು ಸೇತುವೆ ಮೇಲೆ ಸಂಚಾರ ನಿರ್ಭಂದಿಸಲು ಜಿಲ್ಲಾಡಳಿತ ಯೋಜನೆ ರೂಪಿಸಲು ಮುಂದಾಗಿದೆ. ಸದ್ಯ ಕೃಷ್ಣಾ ಸೇತುವೆ ಪಕ್ಕದಲ್ಲೇ ಮತ್ತೊಂದು ಸೇತುವೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ನೂತನ ಸೇತುವೆ ಪೂರ್ಣಗೊಂಡ ನಂತರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ಡಾ. ಬಾಬುರಾವ್ ತಿಳಿಸಿದ್ದಾರೆ.