ರಂಗಭವನ ನಿರ್ಮಾಣಕ್ಕೆ ಒತ್ತಾಯ
(ಸಂಜೆವಾಣಿ ವಾರ್ತೆ)
ರಾಯಚೂರು,ಮಾ.೨- ರಾಯಚೂರು ನಗರದಲ್ಲಿ ೧೦೦ ರಿಂದ ೧೫೦ ಆಸನ ವ್ಯವಸ್ಥೆಯುಳ್ಳ ಚಿಕ್ಕ ರಂಗಮಂದಿರ ಸ್ಥಾಪನೆಯ ಅವಶ್ಯಕತೆ ಇದೆ ಎಂದು ಸಾಹಿತಿ ಪಲುಗುಲ ನಾಗರಾಜ್ ತಿಳಿಸಿದ್ದಾರೆ.
ನಗರದಲ್ಲಿ ವರ್ಷ ಪೂರ್ತಿ ಸಾಂಸ್ಕೃತಿಕ, ಸಾಹಿತ್ಯ, ಚಟುವಟಿಕೆಗಳು ನಡೆಯುತ್ತಿರುತ್ತವೆ. ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ರಂಗಮಂದಿರದಲ್ಲಿ ಆಯೋಜಿಸಬಹುದಾಗಿದೆ.ಆದರೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ರಂಗಮಂದಿರದಲ್ಲಿ ಆಯೋಜಿಸಿರುವುದರಿಂದ ಆಯೋಜಕರಿಗೆ ಹೆಚ್ಚು ಹೊರೆಯಾಗಲಿದೆ. ಈ ಸಮಸ್ಯೆಯಿಂದ ಹೊರ ಬರಲು ೧೦೦ ರಿಂದ ೧೫೦ ಆಸನ ವ್ಯವಸ್ಥೆಯುಳ್ಳ ರಂಗಮಂದಿರದ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಡಬೇಕೆಂದು ನಾಗರಾಜು ಮನವಿ ಮಾಡಿದ್ದಾರೆ.
ಬೆಂಗಳೂರಿನ ನಯನ ಸಭಾಂಗಣದ ಮಾದರಿಯಲ್ಲಿ ಎಲ್ಲಾ ಸೌಲಭ್ಯವುಳ್ಳ ರಂಗಮಂದಿರದ ಅವಶ್ಯಕತೆ ನಗರಕ್ಕೆ ಇದೆ. ನಗರದ ಹೃದಂiiಭಾಗದಲ್ಲಿ ಸ್ಥಳವನ್ನು ಗುರುತಿಸಿ, ಚಿಕ್ಕ ರಂಗಮಂದಿರಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ. ಉಳಿದಂತೆ ಸ್ಥಳೀಯ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಆಸಕ್ತಿವಹಿಸಬೇಕಿದೆ.
ರಾಯಚೂರಿನಲ್ಲಿ ಇನ್ನು ಹೆಚ್ಚು ಹೆಚ್ಚು ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆಗೆ ಸಣ್ಣ ರಂಗಮಂದಿರ ಹೆಚ್ಚು ಸಹಕಾರಿಯಾಗಲಿದೆ ಎಂದು ಸಾಹಿತಿ ಪಲುಗಲು ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.