ರಾಜ್ಯ ಮಟ್ಟದ ಶಿಕ್ಷಣ ಶ್ರೀ ಪ್ರಶಸ್ತಿ
ಶಹಾಬಾದ,ಮಾ.2-ರಾಜ್ಯ ಮಟ್ಟದ ಶಿಕ್ಷಣ ಶ್ರೀ ಪ್ರಶಸ್ತಿಗೆ ಆಯ್ಕೆ ಕಲಬುರ್ಗಿ ಜಿಲ್ಲೆಯ ಉಪನ್ಯಾಸಕ ಡಾ. ಆಂಜನೇಯ.ಬಿ.ಸಿಂಗನೋಡಿ ಅವರು ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಮಾ.3 ರಂದು ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಎಸ್.ಡಿ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ 4 ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ದುರ್ಗಪ್ಪ ಹೆಚ್. ಪೂಜಾರಿ ತಿಳಿಸಿದ್ದಾರೆ.