ಮಟಕಾ: ಓರ್ವನ ಬಂಧನ
ಕಲಬುರಗಿ,ಮಾ.2-ನಗರದ ಪಿ ಆ್ಯಂಡ್ ಟಿ ಕ್ವಾಟರ್ಸ್ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಎಎಸ್‍ಐ ಶಿವಶರಣಪ್ಪ ಕೊರಳ್ಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸುಂದರ ನಗರದ ವಿನೋದ ಗಾಜರೆ (39) ಎಂಬಾತನನ್ನು ಬಂಧಿಸಿ 1120 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.