ತಂತ್ರಜ್ಞಾನ ಪ್ರದರ್ಶನ: ಪಿಡಿಎ ಕಾಲೇಜು ದ್ವಿತೀಯ ಸ್ಥಾನ
ಕಲಬುರರ್ಗಿ,ಮಾ 2: ಹೈದರಾಬಾದ್ ಸಿ.ಬಿ.ಐ.ಟಿ ಕಾಲೇಜಿನಲ್ಲಿ ನಡೆದ ತಂತ್ರಜ್ಞಾನ ಪ್ರದರ್ಶನದಲ್ಲಿ ಕಲಬುರಗಿ ಪಿ.ಡಿ.ಎ ಕಾಲೇಜಿನ 3 ನೇ ವರ್ಷದ ಎಐಎಮ್‍ಎಲ್ ವಿಭಾಗದ ವಿದ್ಯಾರ್ಥಿಗಳಾದ ಸಂಕೇತ ಕರ, ವಿಶಾಲ ಅರಕೇರಿ, ಅಬ್ದುಲ ಹಸೀಬ್,ಮತ್ತು ಮೊಹಮ್ಮದ್ ಯಾಸಿನ ಅವರು ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಪಿ.ಡಿ.ಎ ಕಾಲೇಜು ಪ್ರಾಂಶುಪಾಲ ಡಾ. ಎಸ್.ಆರ್.ಮಿಸೆ, ಉಪ ಪ್ರಾಂಶುಪಾಲ ಡಾ. ಶ್ರೀದೇವಿ ಸೋಮಾ ಮತ್ತು ಡಾ. ಎಸ್.ಆರ್. ಹೊಟ್ಟಿ ಹಾಗೂ ವಿಭಾಗದ ಮುಖ್ಯಸ್ಥ ಡಾ. ಉದಯ ಬಳಗರ್, ಬೋಧಕ ವರ್ಗದ ಡಾ. ವಿಶ್ವನಾಥ ಬುರಕ್ಪಲ್ಲಿ, ಡಾ.ಭಾರತೀ ಹರಸುರ, ಡಾ.ಬಾಬುರಾವ್ ಶೇರಿಕರ್, ಪೆÇ್ರ.ಅಶೋಕ ಪಾಟೀಲ,ಡಾ. ಸುಜಾತಾ ತೇರದಾಳ, ಪೆÇ್ರ.ಮುಕುಂದ ಹರವಾಲಕರ್ ಅವರು ಪ್ರಶಂಸಿಸಿ ಅಭಿನಂದಿಸಿದರು