ಅಪಘಾತ ಪ್ರಕರಣ: ಕಾರು ಚಾಲಕನಿಗೆ ದಂಡ
ಕಲಬುರಗಿ,ಮಾ.2: ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣನಾದ ಕಾರುಚಾಲಕ ನಿತಿನ್ ಕುಮಾರ ಚಂದ್ರಕಾಂತ ಎಂಬಾತನಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯವು 2 ಸಾವಿರ ರೂ ದಂಡ ವಿಧಿಸಿದೆ.ದಂಡ ಕೊಡದೇ ಹೋದಲ್ಲಿ 2 ದಿನಗಳ ಸಾದಾ ಶಿಕ್ಷೆ ವಿಧಿಸಲಾಗಿದೆ.
2020 ರ ಮೇ.12 ರಂದು ಬೈಕ್ ಸವಾರ ಚೇತನ್ ಜೇವಣಗಿ ರಸ್ತೆಯ ಮೂಲಕ ಹೋಳಕುಂದಾ ಗ್ರಾಮಕ್ಕೆ ಹೊರಟಾಗ ಕಮಲಾಪುರ ಕಡೆಯಿಂದ ನಿತಿನ್ ಕುಮಾರ ಚಲಾಯಿಸಿಕೊಂಡು ಬಂದ ಕಾರಿನಿಂದ ಅಪಘಾತವಾಗಿತ್ತು.ಅ.22 ರಂದು ಬೈಕ್ ಸವಾರ ಮೃತರಾಗಿದ್ದರು.ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಎಂ ಚೌಗಲಾ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದರು.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಿವಶರಣಪ್ಪ ಅವರು ವಾದ ಮಂಡಿಸಿದ್ದರು.