1ಎಕರೆಗೆ 14 ಕ್ವಿಂಟಾಲ್ 3 ಎಕರೆಗೆ 75 ಪಾಕಿಟ್ ಜೋಳ ಬೆಳದ ರೈತರು
ಸೇಡಂ,ಮಾ,02: ಈ ಬಾರಿ ತಾಲೂಕಿನಲ್ಲಿ ಜೋಳ ಬಿತ್ತನೆ ಮಾಡಿದ ರೈತರು ಭರಪೂರ ಜೋಳ ಬೆಳೆಯುವ ಮೂಲಕ ತಾಲೂಕಿನಲ್ಲಿ ಹೆಸರುವಾಸಿಯಾಗಿದ್ದಾರೆ, ಬಿಬ್ಬಳ್ಳಿ ಗ್ರಾಮದಲ್ಲಿರುವ ನಾಗೇಂದ್ರಪ್ಪ ಹೊಸಮನಿ ಅವರು ತಮ್ಮ 1 ಎಕರೆ ಜಮೀನುದಲ್ಲಿ 14 ಕ್ವಿಂಟಾಲ್ ಜೋಳ ಬೆಳೆದಿದ್ದಾರೆ, ಹಾಗೂ ಭುತಪೂರ್ ಗ್ರಾಮದಲ್ಲಿರುವ ಸಂತೋಷಕುಮಾರ ಬೋಯಿನ ಅವರು ತಮ್ಮ 3 ಎಕರೆ ಜಮೀನಿನಲ್ಲಿ 60 ಕೆಜಿ ತೂಕದ 75 ಪಾಕಿಟ್ ಜೋಳ ಬೆಳೆಯುವ ಮೂಲಕ ಹೆಚ್ಚಿನ ಜೋಳ ಬೆಳೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಸಂಜೆವಾಣಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.