ಪಕ್ಷಿಗಳಿಗೆ ನೀರಿನ ಅರವಟಿಗೆ ನಿರ್ಮಾಣ:ವಿರೇಶ ಕುಂಬಾರ
ಯಡ್ರಾಮಿ:ಮಾ.2:ಪಕ್ಷಿಗಳಿಗೆ ನೀರಿನ ಕೊರತೆಯಾದರೆ ಜೀವ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.ನೀರಿನ ಅರವಟಿಗೆ ಮರಗಳಲ್ಲಿ ಸಿಲುಕಿಸುವುದರಿಂದ,ನೀರಿಗಾಗಿ ಬರುವ ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗುತ್ತದೆ ಎಂದು ವಿರೇಶ ಕುಂಭಾರ ನೀರಿನ ಅರವಟಿಗೆ ನಿರ್ಮಾಣ ಮಾಡಿದ್ದಾರೆ.
ಪಟ್ಟಣದ ಸರ್ಕಾರಿ ಬಿ.ಸಿ.ಎಮ್ ಬಾಲಕರ ವಸತಿ
ನಿಲಯದ ಆವರಣದಲ್ಲಿ ಬೇಸಿಗೆ ಕಾಲ ಇರುವುದರಿಂದ ಮರಗಳ ಆಸರೆ ಪಡೆದುಕೊಳ್ಳಲು ಪಕ್ಷಿಗಳು ಬರುತ್ತವೆ.ಪಕ್ಷಿಗಳು ಮರಗಳಲ್ಲಿ ಹಾಗೂ ನಿಸರ್ಗದಲ್ಲಿ ದೊರೆಯುವ ಆಹಾರ ಪಡೆದುಕೊಳ್ಳುತ್ತವೆ.
ಆದರೆ ನೀರು ಯಡ್ರಾಮಿ ಪಟ್ಟಣದಲ್ಲಿ ನೀರಿನ ಮೂಲಗಳಾದ ಹಳ್ಳಗಳು ಮತ್ತು ಬೋರವೇಲ್ ಹಾಗೂ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಪಟ್ಟಣದ ಜನರು ಸಂಕಷ್ಟ ಪರಿಸ್ಥಿತಿ ಇದ್ದು.ಹಿಂತಹ ಸಂದರ್ಭದಲ್ಲಿ ಪಕ್ಷಿಗಳಿಗೆ ಅರವಟಿಗೆ ಮಾಡುವ ಮೂಲಕ ಪಕ್ಷಿಗಳ ಸಂರಕ್ಷಣೆ ಕಾರ್ಯ ಮಾಡಿ ಸಾರ್ವಜನಿಕ ಮೆಚ್ಚುಗೆ ಪಾತ್ರರಾಗಿದ್ದು.
ಈ ವೇಳೆಯಲ್ಲಿ ಸಾಮಾಜಿಕ ಕಾರ್ಯವನ್ನು ಮೆಚ್ಚಿ
ವಸತಿ ನಿಲಯದ ಶರಣು ಕುಂಬಾರ ಮೇಲ್ಚರಕರು ಹಾಗೂ ಸಿಬ್ಬಂದಿವರ್ಗ ನಾಗಲಿಂಗೇಶ್ವರ ಕಾಲೋನಿಯ ಯುವ ಸಮುದಾಯದ ಜನರು ಸಹಕಾರ ನೀಡಿದರು.