ಶಿಕ್ಷಣ ನಮ್ಮ ಬದುಕಿಗೆ ತಿರುವು ಕೊಡುವ ಅಂಶ: ಡಾ.ಜಗದೀಶ
ಕೊಲ್ಹಾರ:ಮಾ.2:ಹಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳು ವಿಜ್ಞಾನ ವಿಷಯ ಆಸಕ್ತಿಯಿಂದ ಕಲಿತು ವೈದ್ಯಕೀಯ,ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಆಸ್ಟ್ರೇಲಿಯಾ ದೇಶದ ಅತಿಥಿ ಡಾ.ಜಗದೀಶ ಹೇಳಿದರು.
ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಶಾಲೆಗೆ ಭೇಟಿನೀಡಿ ಮಾತನಾಡಿದರು.
ಈಗ ಪ್ರತಿ ಹಳ್ಳಿಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಶಿಕ್ಷಣ ನಮ್ಮ ಬದುಕಿಗೆ ತಿರುವು ಕೊಡುವ ಅಂಶ ಎಂದರು.
ಭಾರತವು ಬಲಿಷ್ಠವಾಗುತ್ತಿದೆ, ಜಗತ್ತಿನ ಎಲ್ಲ ದೇಶಗಳಲ್ಲಿ ಭಾರತೀಯ ಮೂಲದ ಜನತೆ ದೊಡ್ಡ ದೊಡ್ಡ ಹುದ್ದೆಯನ್ನು ಹೊಂದಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಕುಪಕಡ್ಡಿ ಗ್ರಾಮದವರಾಗಿ ದೂರದ ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಕೀರ್ತಿಯನ್ನು ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತದ್ದೆವೆ ಅದು ನಮ್ಮ ಮಣ್ಣಿನ ಗುಣ ಎಂದರು.
ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಉಪನ್ಯಾಸ ನೀಡಿದರು.
ಇವರೊಂದಿಗೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾರತೀಯ ಮೂಲದ ಆಸ್ಟ್ರೇಲಿಯಾದ ಪರ್ಥನ್ ಪಿಒನಾ ಸ್ಟೇನಿ ಹಾಸ್ಪಿಟಲ್ ನ ಕನ್ಸಲ್ಟಂಟ್ ನೆಪೆÇ್ರೀಲಾಜಿಸ್ಟ್ ಕ್ಲಿನಿಕಲ್ ಅಸೋಸಿಯೆಟ್ ಪೆÇ್ರಪೆಸರ್‍ಡಾ.ಜಗದೀಶ ಎಸ್.ಜಾಂಬೋಟಿ, ಆರ್ಮಡಲ್ ಹಾಸ್ಪಿಟಲ್ ಕನ್ಸಲ್ಟಂಟ್ ನ ಡಾ.ಸರೋಜನಿ ಜಗದೀಶ ಹಾಗೂ ಮೆಲ್ಬರ್ನ್ ಮೊನಸಾ ಮೆಡಿಕಲ್ ಸೆಂಟರ್‍ಟ್ರೇನಿಂಗ್ ಇನ್ ಅಪ್ತಾಲಾಜಿ ಡಾ.ಪ್ರಜ್ಞಾ ಜಗದೀಶ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮುರುಗೇಶ ಹಳ್ಳಿ, ಪ್ರಕಾಶ ಉಗ್ರಾಣ, ಮಹೇಶ ಉಗ್ರಾಣ, ಸಂಗಮೇಶ ಉಗ್ರಾಣ, ಶಾಲೆಯ ಸಿಬ್ಬಂದಿಗಳಾದ ಹಣಮಂತ ಬಿರಾದಾರ, ಹೇಮಾವತಿ, ಸಿದ್ದು ಕೋಟ್ಯಾಳ,ಬಾಬು ಪವಾರ, ಕವಿತಾ ಹಿರೇಮಠ, ಶಾಂತಪ್ಪ ನಾಗರಳ್ಳಿ, ಲಕ್ಷ್ಮೀ ವನೇಶಿ, ಆನಂದ ಹೊಲ್ದೂರ ಸೇರಿದಂತೆ ಗ್ರಾಮದ ಹಿರಿಯರು ಭಾಗಿಯಾದರು.