ಇಡೀ ವಿಶ್ವವೇ ಭಾರತಕಡೆಗೆ ನೋಡುವಂತಾಗಿದೆ:ಸಿದ್ದಲಿಂಗಶ್ರೀ
ತಾಳಿಕೋಟೆ:ಮಾ.2: ಈ ಹಿಂದೆ ಒಂದು ಕಾಲದಲ್ಲಿ ಇಡೀ ವಿಶ್ವವೇ ಗ್ರೀಕ್ ದೇಶದ ಕಡೆಗೆ ನೋಡುತ್ತಿತ್ತು ಆದರೆ ಭಾರತ ದೇಶದಲ್ಲಿ ಶರಣರ, ಸತ್ಪುರುಷರು ಬಿತ್ತಿ ಹೋದ ಸನಾತನ ಪರಂಪರೆಯ ಫಲವಾಗಿ ಇಡೀ ವಿಶ್ವವೇ ಭಾರತದೆಡೆಗೆ ನೋಡುವಂತಾಗಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಪಟ್ಟಣದ ಪುರಾತನ ದೇವಸ್ಥಾನವಾದ ಶ್ರೀ ಪರ್ವತ ಮಲ್ಲಯ್ಯ ದೇವಸ್ಥಾನದಲ್ಲಿ ಶ್ರೀ ಮಲ್ಲಿಕಾರ್ಜನ ಈಶ್ವರ ಲಿಂಗು ಪುನರ್ ಪ್ರತಿಷ್ಠಾಪನಾ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಶ್ರೀಶೈಲ ಚನ್ನಮಲ್ಲಿಕಾರ್ಜುನ, ಅಕ್ಕಮಹಾದೇವಿ, ಅಲ್ಲದೇ ಅನೇಕ ಸತ್ಪುರುಷರು ಭಾಳಿ ಬೆಳಗಿದ ಈ ಭಾರತ ದೇಶದ ಪುಣ್ಯಭೂಮಿ ಇಂದು ಇಡೀ ವಿಶ್ವದಲ್ಲಿ ಪ್ರಜ್ವಲಿಸುತ್ತಿದೆ ನಮ್ಮ ದೇಶದ ಸನಾತನ ಧರ್ಮದ ಪರಂಪರೆಯನ್ನು ಎಲ್ಲ ದೇಶಗಳು ಮೆಚ್ಚಿಕೊಂಡಿವೆ ಮತ್ತು ಅನುಸರಿಸುತ್ತಿವೆ ಇಂತಹ ಧರ್ಮ ಪರಂಪರೆಯಲ್ಲಿರುವ ನಾವುಗಳು ಪುರಾತನ ದೇವಸ್ಥಾನಗಳನ್ನು ಜೀರ್ಣೋದ್ದಾರಗೊಳಿಸುವ ನಿಟ್ಟಿನಡೆಗೆ ಸಾಗುತ್ತಿರುವದು ಸಂತಸವಾಗಿದೆ ಎಂದ ಅವರು ಪೂರ್ವಿಕವಾದ ಶ್ರೀ ಪರ್ವತ ಮಲ್ಲಯ್ಯ ದೇವಸ್ಥಾದಲ್ಲಿ ಲಿಂಗು ಪುನರ್ ಪ್ರತಿಷ್ಠಾಪಿಸುವದರೊಂದಿಗೆ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂದಾಗಿರುವದು ಮೆಚ್ಚುವಂತಹದ್ದಾಗಿದೆ ಅಲ್ಲದೇ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಗುಂಡಕನಾಳ ಬೃಹನ್ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ನಮ್ಮ ದೇಶದ ಸನಾತನ ಪರಂಪರೆ ಉಳಿಯಬೇಕಾದರೆ ಮಠ ಮಾನ್ಯಗಳು ಜೀರ್ಣೋದ್ದಾರಗೊಳ್ಳುವದು ಅವಶ್ಯವಾಗಿದೆ ಮತ್ತು ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಪರ್ವತ ಮಲ್ಲಯ್ಯ ದೇವಸ್ಥಾನವನ್ನು ವರ್ಷದಿಂದ ವರ್ಷಕ್ಕೆ ಎಲ್ಲ ಜನರು ಕೈ ಜೋಡಿಸಿ ಜಿರ್ಣೋದ್ದಾರ ಕೈಗೊಳ್ಳುತ್ತಾ ಸಾಗಿರುವದು ಮೆಚ್ಚುವಂತಹದ್ದಾಗಿದೆ ಈ ಭಾಗದ ಭಕ್ತರ ಆಶೆಯದಂತೆ ಪ್ರತಿವರ್ಷ ಈ ಭಾಗದ ಮೂಲಕ ತೆರಳುವ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗಳು ಈ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸುವದರೊಂದಿಗೆ ಮುಂದೆ ಸಾಗುವಂತಹ ಪದ್ದತಿ ಮರುಕಳಿಸುವಂತಹ ಕಾರ್ಯ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೂ ಮೊದಲು ವೇ.ಸಿದ್ರಾಮಯ್ಯಸ್ವಾಮಿ ಬೇನಾಳಮಠ, ವೇ.ಬಸಯ್ಯ ಶಾಸ್ತ್ರೀಗಳು ಕೊಡೇಕಲ್ಲ, ವಿರೇಶ ಶಾಸ್ತ್ರೀಗಳು ಹುಣಸಗಿ, ಇವರಿಂದ ಗಂಗಾ ಪೂಜೆ, ಗಣಪತಿ ಪೂಜೆ, ಅಲ್ಲದೇ ನವಗ್ರಹ ಪೂಜೆಯೊಂದಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಗಳನ್ನು ನೇರವೇರಿಸಲಾಯಿತು. ನಂತರ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ, ಡಾ.ಗಂಗಾಂಬಿಕಾ ಪಾಟೀಲ, ಅಶೋಕ ಹಂಚಲಿ, ಆರ್.ಎಲ್.ಕೊಪ್ಪದ, ಸಂಗನಗೌಡ, ಮಲ್ಲನಗೌಡ ಪಾಟೀಲ, ಚನಮಲ್ಲು ಕತ್ತಿ, ಅಣ್ಣು ವಾಲಿ, ಅರ್ಚಕರಾದ ನೀಲಕಂಠಯ್ಯಸ್ವಾಮಿ, ಮೊದಲಾದವರು ಇದ್ದರು.