ಎರಡು ದಿನದಲ್ಲಿ ದಾಖಲಾತಿ ಬಿಡುಗಡೆ ಮಾಡಿ:ಶಾಸಕ ಅಶೋಕ್ ಮನಗೂಳಿ ಸವಾಲು
ಸಿಂದಗಿ:ಮಾ.2: ಮಾಜಿ ಶಾಸಕರು ಪತ್ರಿಕಾಗೋಷ್ಟಿಯಲ್ಲಿ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಹೇಳುತ್ತಿರುವುದು ಸುಳ್ಳು. 5 ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಬಡ ಕುಟುಂಬಗಳು ನಿಟ್ಟುಸಿರು ಬಿಟ್ಟು ನೆಮ್ಮದಿಯ ಜೀವನ ನಡೆಸುತ್ತೀವೆ ಎಂದು ಶಾಸಕ ಅಶೋಕ ಮನಗೂಳಿ ಟಾಂಗ ನೀಡಿದರು.
ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 125ಕೋಟಿ ಅನುದಾನ ತಂದಿರುವುದು ಸುಳ್ಳು ಎಂದು ಹೇಳಿ ದಾಖಲೆಗಳನ್ನು ಸಾಬೀತು ಪಡಿಸಲಿ ಎಂದು ಮಾಜಿ ಶಾಸಕರು ಸವಾಲು ಹಾಕಿದ್ದನ್ನು ಪಕ್ಷದ ಮುಖಂಡರು ಸವಾಲಾಗಿ ಸ್ವೀಕರಿಸಿ ಸಿಂದಗಿ ಮತಕ್ಷೇತ್ರಕ್ಕೆ ತಂದಿರುವ 125 ಕೋಟಿ ಅನುದಾನದ ದಾಖಲೆಗಳನ್ನು ಮಾಧ್ಯಮದ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. 2008-2013, 2013-2018, 2021-23 176 ತಿಂಗಳ ಅಧಿಕಾರ ಮಾಡಿದ್ದಾರೆ. ಆದರೆ ನಾನು ಇನ್ನೂ 9 ತಿಂಗಳ ಅಧಿಕಾರ ಹಿಡಿದ ಕೂಸು. ರಾಜಕೀಯ ಅನುಭವವಿರುವ ಭೂಸನುರ ಇಂತಹ ಹೇಳಿಕೆ ಕೊಡುವುದು ಸೂಕ್ತವಲ್ಲ ಎಂದು ಹರಿಹಾಯ್ದರು.
ಸಿಂದಗಿ ಮತಕ್ಷೇತ್ರಕ್ಕೆ 236ಕೋಟಿ ಅನುದಾನವನ್ನು ಮಂಜೂರು ಮಾಡಿಸಿರುವೆ. ಅದರಲ್ಲಿ ಮತಕ್ಷೇತ್ರದ ಹಳ್ಳಿಗಳಲ್ಲಿ ಸಿಸ ರಸ್ತೆಗೆ 14ಕೋಟಿ, ದೇವಸ್ಥಾನಗಳ ಸಮುದಾಯ ಭವನ ನಿರ್ಮಾಕ್ಕಾಗಿ 8.65 ಕೋಟಿ, ಅಲ್ಪ ಸಂಖ್ಯಾತರ ಸಮುದಾಯ ಭವನ, ಈದಗಾ ಅಭಿವೃದ್ಧಿಗಾಗಿ 2.35ಕೋಟಿ, ಕೋರವಾರ ಬ್ರಾ್ಯಂμï ಕ್ಯಾನಲಗೆ 96.66 ಕೋಟಿ, ನಗರದ ಮುಖ್ಯ ರಸ್ತೆಗಳ ಬೀದಿ ದೀಪಗಳಿಗೆ 5 ಕೋಟಿ, ಮುಖ್ಯ ರಸ್ತೆಗಳ ಡಿವೈಡರ್ ನಿರ್ಮಾಣಕ್ಕೆ 1.25 ಕೋಟಿ, ಆಲಮೇಲ ಕೆರೆ ಅಭಿವೃದ್ಧಿಗೆ 3.50 ಕೋಟಿ, ಆಲಮೇಲ ತಾಲೂಕು ಪಂಚಾಯತ್ ಅನುದಾನ 2.10ಕೋಟಿ, ಸಿಂದಗಿ ಸರಕಾರಿ ಆಸ್ಪತ್ರೆಗೆ ಅಭಿವೃದ್ದಿಗೆ 1.84ಕೋಟಿ ಸೇರಿ ವಿವಿಧ ಕಾಮಗಾರಿಗಳಿಗೆ ಒಟ್ಟು ಮತಕ್ಷೇತ್ರಕ್ಕೆ ಮೇ5, 2023ರಿಂದ ಪ್ರಸ್ತುತದವರೆಗೆ 236ಕೋಟಿ ಅನುದಾನ ಮಂಜೂರು ಮಾಡಿಸಿರುವ ದಾಖಲೆ ಇದೆ ಎಂದು ಗುಡುಗಿದರು.
ಪಟ್ಟಣದ ಸರಕಾರಿ ಪಪೂ ಕಾಲೇಜಿನ ನಾಲ್ಕು ಕೋಣೆಗಳು ನಿರ್ಮಾಣ ಟೆಂಡೆರ್ ಪ್ರಗತಿಯಲ್ಲಿದೆ. ಸೋಮಜಾಳ, ಸುರಗಿಹಳ್ಳಿ, ಗಣಿಹಾರ, ಕೋಕಟನೂರ ಆರ್‍ಎಮ್‍ಎಸ್‍ಎ ಶಾಲಾ ಕಟ್ಟಡ ನಿರ್ಮಾಣ ಟೆಂಡರ್ ಪ್ರಗತಿಯಲ್ಲಿದೆ. ಬಿಜೆಪಿ ಅವಧಿಯಲ್ಲಿನ ರಸ್ತೆಗಳ ಪರಿಸ್ಥಿತಿ ಹೇಳತಿರದು. ಗುತ್ತಿಗೆದಾರರು ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಕಾರ್ಯ ಮಾಡಿದ್ದೇವೆ ಇನ್ನೂ ಬಿಲ್ ಆಗಿಲ್ಲವೆಂದು ಗೋಳು ತೋಡಿಕೊಳ್ಳುತಿದ್ದಾರೆ.
ಕಾಂಗ್ರಸ್ ಸರಕಾರ ಪಕ್ಷಾತೀತ, ಜ್ಯಾತ್ಯಾತೀತ ಮತ್ತು ಧರ್ಮಾತೀತವಾಗಿ ಅಭಿವೃದ್ಧಿ ಮಾಡುತ್ತೀದೆ. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ನೀಲ್ಲುತ್ತದೆ ಎಂಬ ಭ್ರಮೆಯಿಂದ ಹೋರಬನ್ನಿ. ಕೇವಲ 9ತಿಂಗಲಾಗಿದೆ ಇನ್ನೂ ಸಾಕಷ್ಟು ಸಮಯ ಅಭಿವೃದ್ಧಿಗಿದೆ. ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ.
ಶಾಸಕ: ಅಶೋಕ ಮನಗೂಳಿ