ಘಟನೆಗಳ ಆಧಾರದಲ್ಲಿ ಜ್ಞಾನ ಪಡೆಯರಿ
ಬಂಗಾರಪೇಟೆ.ಮಾ೨:ವಿದ್ಯಾರ್ಥಿಗಳು ತರಗತಿಯ ಕೋಣೆಯಲ್ಲಿ ಪುಸ್ತಕದಿಂದ ಭೌದ್ದಿಕ ವಿಕಸನವಾಗುವುದರ ಜೊತೆಯಲ್ಲಿ ನಮ್ಮ ಸುತ್ತ ಮುತ್ತಲಿನ ಸಮಾಜದಲ್ಲಿ ನಡೆಯುವ ಘಟನೆಗಳ ಆಧಾರದಲ್ಲಿ ಅರಿವಿನ ಜ್ಞಾನವನ್ನು ಪಡೆಯಬೇಕು. ಆ ಮೂಲಕ ಸಮಾಜದ ಸತ್ಪ್ರಜೆಗಳಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಎಎಸ್‌ಐ ಭಾನು ಅಭಿಪ್ರಾಯಪಟ್ಟರು.
ಪಟ್ಟಣದ ಸಂತೋಷ್ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಪೊಲೀಸ್ ಇಲಾಖೆಯನ್ನು ಕಂಡರೆ ಭಯದ ವಾತಾವರಣವಿತ್ತು. ಆದರೆ ಪ್ರಸ್ತುತ ಜನಸ್ನೇಹಿ ಪೊಲೀಸ್ ಆಗಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಆತಂಕವಿಲ್ಲದೆ ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಬಹುದು.
ವಿದ್ಯಾರ್ಥಿಗಳು ಅಪರಿಚಿತರ ಆಸೆ ಆಮಿಷಗಳಿಗೆ ಒಳಗಾಗಬಾರದು, ಅನಾಮಿಕ ವ್ಯಕ್ತಿಗಳ ಆಟೋ ಮತ್ತು ವಾಹನಗಳನ್ನು ಸಂಚರಿಸುವುದು ಸೂಕ್ತವಲ್ಲ, ಸಂಚಾರಿ ನಿಮಯಗಳನ್ನು ತಪ್ಪದೇ ಪಾಲಿಸಬೇಕು. ಅವಸರದ ವಾಹನ ಚಾಲನೆ ಅಪಘಾತಕ್ಕೆ ಎಡೆಮಾಡಿಕೊಡುತ್ತದೆ ಎಂದರು.
ಪೋಷಕರು ಮಕ್ಕಳ ಬಗ್ಗೆ ಬಹುದೊಡ್ಡ ಕನಸುಗಳನ್ನು ಹೊತ್ತು ಕಷ್ಟಪಟ್ಟು ಪಾಲನೆ ಮತ್ತು ಪೋಷಣೆ ಮಾಡುತ್ತಾರೆ, ಆದರೆ ಮಕ್ಕಳು ದೊಡ್ಡವರಾದ ತಕ್ಷಣ ಪೋಷಕರನ್ನು ವೃದ್ದಾಶ್ರಮಗಳಿಗೆ ಸೇರ್ಪಡೆ ಮಾಡಿ, ವಿದೇಶಗಳಿಗೆ ಹಾರಿ ಹೋಗುತ್ತಾರೆ. ಮಾನವೀಯ ಮೌಲ್ಯಗಳು ಕುಂಟಿತವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕೆಂದರು. ವಿದ್ಯಾರ್ಥಿಗಳು ಯಾವುದೇ ಘಟನೆಗಳು ಸಂಭವಿಸಿದ್ದಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರಗಳ ನಂ.೧೧೨ಗೆ ಸಂಪರ್ಕಿಸಬೇಕೆಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆದಿಲ್, ಎಸ್‌ಐ ಭಾಗ್ಯಲಕ್ಷಿ?ಮ, ಮುಖ್ಯೋಪಾದ್ಯಾಯ ಮುನಿಯಪ್ಪ, ದೈಹಿಕ ಶಿಕ್ಷಕ ಅಶೋಕ್, ಕನ್ನಡಪರ ಹೋರಾಟಗಾರ ರಮೇಶ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.