ವಿಜ್ಞಾನ ಬೆಳೆಯಲಿ ಅಜ್ಞಾನ ಅಳಿಯಲಿ
ವಿಜಯಪುರ.ಮಾ೨:ಪಟ್ಟಣದ ಪ್ರಗತಿ ಆಂಗ್ಲ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು.
ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಎನ್. ನಾಗರಾಜ್ ರವರು ಮಾತನಾಡಿ, ಎಚ್ಚರಿಕೆಯ ಕ್ರಮಬದ್ಧ ಪ್ರಯತ್ನಗಳಿಲ್ಲದೇ ವೈಜ್ಞಾನಿಕ ಆವಿಷ್ಕಾರ ಅಸಂಭವ. ರಾಮನ್ ಮತ್ತು ರಾಮನ್ ಪರಿಣಾಮ ಇದಕ್ಕೆ ಅತ್ಯುತ್ತಮ ನಿದರ್ಶನ. ಅಜ್ಞಾನ ಅಳಿಯಲಿ, ವಿಜ್ಞಾನ ಬೆಳೆಯಲಿ, ವಿಜ್ಞಾನ ಬೆಳವಣಿಗೆಯಿಂದ ಅಜ್ಞಾನ ಅಳಿಯಲು ಸಾಧ್ಯಎ॒ಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೋಷಕರಾದ ಮಲ್ಲಿಕಾರ್ಜುನ ರವರು ಮಾತನಾಡಿ, ಸಿ.ವಿ ರಾಮನ್ ರವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ನೀವು ಸಹ ಸಿ .ವಿ ರಾಮನ್ ಹಾಗೆ ಒಳ್ಳೆಯ ವಿಜ್ಞಾನಿಗಳಾಗಿ ರಾಷ್ಟ್ರಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುವಂತಹ ವಿದ್ಯಾರ್ಥಿಗಳಾಗಿ ಎಂಬುದನ್ನು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯದರಾದ ಜೆ.ಎನ್ ಪ್ರಕಾಶ್ ಅವರು ವಹಿಸಿದ್ದು, ಮಾತನಾಡಿ, ಅಜ್ಞಾನವನ್ನು ಅಳಿಸಿ.. ಸುಜ್ಞಾನದ ಕಡೆಗೆ ನಡೆಸುವುದೇ.. ವಿಜ್ಞಾನ ಎಂದು ಹೇಳುತ್ತಾ..ಸಿ .ವಿ .ರಾಮನ್ ರವರು ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರೈಸ್ ಗೆದ್ದ ಭಾರತದ ಏಕೈಕ ವ್ಯಕ್ತಿ. ಇವರ ಆದರ್ಶಗಳು, ಇವರು ಮಾಡಿದಂತಹ ಸಾಧನೆ ನಿಮ್ಮೆಲ್ಲರಿಗೂ ಮಾರ್ಗದರ್ಶಕವಾಗಲಿ ನೀವು ಕೂಡ ಸಿ.ವಿ ರಾಮನ್ ಹಾಗೆ ರಾಷ್ಟ್ರಕ್ಕೆ ಒಳ್ಳೆಯ ಕೊಡುಗೆ ನೀಡುವ ವಿಜ್ಞಾನಿಗಳಾಗಿ ಎಂದು ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಗತಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಹರೀಶ್ ಕುಮಾರ್ ರವರು ಮಾತನಾಡಿ, ವಿದ್ಯಾರ್ಥಿಗಳಾದ ನೀವು ಏಷ್ಯಾದಲ್ಲಿ ಪ್ರಥಮವಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಸಿ,ವಿ ರಾಮನ್ ರವರು ಹಾಕಿಕೊಟ್ಟಂತಹ ಅಡಿಪಾಯದಲ್ಲಿ ನೀವು ಕೂಡ ರಾಷ್ಟ್ರಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.
ಪ್ರಗತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ವಿ .ಬಸವರಾಜ್‌ರವರು ಮಾತನಾಡಿ, ಈ ವರ್ಷದ ವಿಜ್ಞಾನ ದಿನಾಚರಣೆಯ ಥೀಮ್ ಏನೆಂದರೆ “ವಿಕ್ಷಿತ್ ಭಾರತ್ ಗಾಗಿ ಸ್ಥಳೀಯ ಜ್ಞಾನಗಳು” ವಿಷಯದೊಂದಿಗೆ ೨೦೨೪ ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.