ದ್ವಿತೀಯ ಪಿಯುಸಿ: ಮೊದಲ ದಿನ 24 ಮಂದಿ ಗೈರು
ಸಂಜೆವಾಣಿ ವಾರ್ತೆ
ಹನೂರು.ಮಾ.2:- ದ್ವಿತೀಯ ಪಿಯುಸಿ ಮೊದಲ ದಿನದ ತಾಲ್ಲೂಕಿನ ದ್ವಿತೀಯ ಪಿಯುಸಿ ಮೊದಲ ದಿನದ ಪರೀಕ್ಷೆಯು ಹನೂರು ತಾಲ್ಲೂಕಿನ 3 ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ನಡೆದ ಕನ್ನಡ ಭಾಷಾ ಪರೀಕ್ಷೆಗೆ 24 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು.
ಪಟ್ಟಣದ ಕ್ರಿಸ್ತರಾಜ ಪಿಯು ಕಾಲೇಜು, ಜಿ.ವಿ.ಗೌಡ ಕಾಲೇಜ್ , ರಾಮಾಪುರ ಜೆ. ಎಸ್. ಎಸ್ ಪಿ ಯು ಕಾಲೇಜ್ ನಲ್ಲಿ ಪಿಯುಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಿ ಪ್ರಿಯಾ ಶಂಕರ್, ಸ್ವಾಮಿ, ಮುತ್ತುರಾಜ್, ಉಪಮುಖ್ಯ ಅಧೀಕ್ಷಕರಾದ ಮಹದೇವಪ್ರಭು, ವಿಶೇಷ ಜಾಗೃತ ದಳದ ಸದಸ್ಯ ರಾಮೇ ಗೌಡ, ಉತ್ತರ ಪತ್ರಿಕೆಯ ಪಾಲಕರಾಗಿ ಪ್ರಕಾಶ್, ಕಚೇರಿಯ ಅಧೀಕ್ಷಕರಾದ ಪವಿತ್ರ ಪಿ.ಎನ್ , ಹಾಗೂ ಪೆÇಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.