ಗ್ರಾಮಗಳ ಸ್ವಚ್ಚತೆಗೆ ಸಿದ್ದರಾದ ಸ್ವಚ್ಚ ವಾಹಿನಿಯ ಮಹಿಳಾ ವಾಹನ ಚಾಲಕಿಯರ ಪ್ರಶಂಸಿಸಿದ ಜಿ.ಪಂ ಸಿಇಓ
ವಿಜಯಪುರ:ಮಾ.2: ರುಡಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾದ ಜಿಲ್ಲಾ ಪಂಚಾಯತಿಯ ಆಚಿಥಿ-ಓಖಐಒ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು Sಃಒ- ಸ್ವಚ್ಚ ಭಾರತ ಮಿಷನ್(ಗ್ರಾಮೀಣ) ಯೋಜನೆಗಳ ಸಹಯೋಗದೊಂದಿಗೆ ಆಯೋಜಿಸಲಾದ 6ನೇ ಬ್ಯಾಚನ “ಮಹಿಳಾ ವಾಹನ ಚಾಲಕಿಯರ” ತರಬೇತಿಯ ಸಮಾರೋಪ ಸಮಾರಂಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ರವರು ಮಹಿಳಾ ವಾಹನ ಚಾಲಕಿಯರ ತರಬೇತಿಯ ಸಮಾರೋಪ ಸಂಮಾರಂಭ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದರು.
ಜಿಲ್ಲಾ ಪಂಚಾಯತಿ, ವಿಜಯಪುರ ವತಿಯಿಂದ ಒಂದು ತಿಂಗಳ ಕಾಲ ಉಚಿತ, ಊಟ ವಸತಿಯೊಂದಿಗೆ ರುಡಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾದ “ಲಘು ವಾಹನ ಚಾಲನಾ ತರಬೇತಿ”ಯಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲ 13 ತಾಲೂಕಿನ 25 ಗ್ರಾಮ ಪಂಚಾಯತಿ ಸ್ವ-ಸಹಾಯ ಸಂಘಗಳಿಂದ ಆಯ್ಕೆ ಮಾಡಲಾದ ಮಹಿಳಾ ವಾಹನ ಚಾಲಕಿಯರಿಗೆ ಉಚಿತ ತರಬೇತಿ ನೀಡಿ ಅವರ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಜಿ.ಪಂ ಸಿಇಓ ರವರು ಪ್ರಮಾಣ ಪತ್ರ ವಿತರಣೆ ಮಾಡಿ ತರಬೇತಿಯಲ್ಲಿ ಭಾಗವಹಿಸಿದ ಮಹಿಳಾ ವಾಹನ ಚಾಲಕಿಯರು ಸಿಇಓ ರವರೊಂದಿಗೆ ಒಂದು ತಿಂಗಳ ಕಾಲದ ವಾಹನ ಚಾಲನಾ ತರಬೇತಿಯ ಅನಿಸಿಕೆಗಳನ್ನು ಹಾಗೂ ಬ್ಯಾಂಕ್ ವ್ಯವಹಾರಗಳು ಇನ್ನಿತರ ಸರ್ಕಾರಿ ಯೋಜನೆಗಳ ಲಾಭ ಪಡಯುವ ಕುರಿತು ಜ್ಞಾನ ಡೆದಿರುವ ಬಗ್ಗೆ ಅನುಭವ ಹಂಚಿಕೊಂಡರು. ಸಿಇಓರವರು “ಸ್ವಚ್ಚ ವಾಹಿನಿ” ವಾಹನವನ್ನು ಚಾಲನೆ ನೀಡುವ ಮೂಲಕ ಮಹಿಳೆಯರಲ್ಲಿ ಆತ್ಮ ಸ್ಥೈರ್ಯ ತುಂಬಿದರು ಹಾಗೂ ಎಲ್ಲರಿಗೂ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈ ವರೆಗೆ 6 ತರಬೇತಿ ಬ್ಯಾಚಗಳಲ್ಲಿ 173 ಗ್ರಾಮ ಪಂಚಾಯತಿಗಳ 173 ಜನ ಮಹಿಳೆಯರಿಗೆ ತರಬೇತಿ ನೀಡಿ 143 ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಿಳೆಯರಿಗೆ ವಾಹನ ಚಾಲನಾ ಪರವಾನಿಗೆ ಹಸ್ತಾಂತರಿಸಲಾಗಿದೆ. ಸುಮಾರು 46 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ನಿತ್ಯ ಮಹಿಳಾ ಚಾಲಕರು ಮತ್ತು 3 ಜನ ಸ್ವಚ್ಚತಾಗಾರ ಮಹಿಳೆಯರು ಘನ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಸಿ. ಆರ್. ಮುಂಡರಗಿ, ಜಿ.ಪಂ.ನ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿಗಳಾದ ಎ. ಬಿ. ಅಲ್ಲಾಪೂರ ಅವರು ಭಾಗವಹಿಸಿ ಎಲ್ಲಾ ಮಹಿಳಾ ಡ್ರೈವರ್ ಅವರಿಗೆ ಜಿಲ್ಲಾ ಪಂಚಾಯತ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಜಾಗೃತಿ ಮತ್ತು ಮತದಾನ ಪ್ರತಿಜ್ಞಾ ವಿಧಿ ಬೋದಿಸುವ ಮೂಲಕ ಮತದಾನದ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ರುಡಸೆಟ್ ಸಂಸ್ಥೆಯ ನಿರ್ದೇಶಕರು, ಹಿರಿಯ ಉಪನ್ಯಾಸಕರುಗಳು, ಎನ್.ಆರ್.ಎಲ್.ಎಮ್ ಯೋಜನೆಯ ಕಾರ್ಯಕ್ರಮ ಸಂಯೋಜಕರಾದ ವಿಶ್ವನಾಥ ಶಹಾಪುರ, ಜಿಲ್ಲಾ ಕಾರ್ಯಕ್ರಮ ಪ್ರಬಂಧಕರಾದ ಅಮೋಘಸಿದ್ಧ ಗೌಳಿ, ಸ್ವಚ್ಛ ಭಾರತ ಮಿಷನ್ (ಗ್ರಾ) ಸಿಬ್ಬಂದಿಗಳಾದ ಕಿರಣ ಅಂಕದ, ಶ್ರೀಧರ ಹೊಸ್ಮನಿ, ಪುನೀತ್ ಕೆಲೂರ ಹಾಗೂ ಇತರರು ಉಪಸ್ಥಿತರಿದ್ದರು.