ಶಿಸ್ತು, ಸಂಯಮ, ಧೈರ್ಯ, ಮೂಡಿಸಲು ಸ್ಕೌಟ್ಸ್ – ಗೈಡ್ಸ್ ತರಬೇತಿ ಸಹಕಾರಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧; ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿಗೆ ತೊಡಗಿಸುವುದರಿಂದ ಅವರಲ್ಲಿ ಧೈರ್ಯ, ಸಾಹಸ, ಶಿಸ್ತು, ಸಂಯಮ, ಸೇವಾ ಮನೋಭಾವನೆ ಮೂಡಲು ಅನುಕೂಲಕರವಾಗುವುದು ಎಂದು ತಾಲೂಕು ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿಗಳಾದ ದೇವರಾಜ್ ಪ್ರಸಾದ ತಿಳಿಸಿದರು.ಅವರು ಚಿತ್ರದುರ್ಗ ನಗರದ ರೋಟರಿ ಕ್ಲಬ್ ಆಯೋಜಿಸಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಇನ್ನಿತರ ಜಿಲ್ಲೆ, ರಾಜ್ಯ ದೇಶಗಳ ವಿದ್ಯಾರ್ಥಿಗಳೊಂದಿಗೆ ಬೆರತಾಗ ರಾಷ್ಟ್ರೀಯ ಭಾವನೆ ವಿಶ್ವ ಕುಟುಂಬ ಎಂಬ ಕಲ್ಪನೆ ಮೂಡುತ್ತದೆ, ಅದರಿಂದ ಸಮಾಜ ಏಳಿಗೆ ಆಗುತ್ತದೆ ಎಂದರು.ಚಿತ್ರದುರ್ಗ ಜಿಲ್ಲಾ ಗೈಡ್ ಕಮಿಷ್ನನರಾದ ಶ್ರೀಮತಿ ಸವಿತಾ ಶಿವಕುಮಾರ್ ಮಾತನಾಡುತ್ತಾ, ಸ್ಕೌಟ್ಸ್ ಅಂಡ್ ಗೈಡ್ಸ್ ಗಳಲ್ಲಿ ತರಬೇತಿ ಹೊಂದಿದಂತ ವಿದ್ಯಾರ್ಥಿಗಳ ನಡತೆಯಲ್ಲಿ, ಕೂರುವುದು, ನಿಲ್ಲುವುದು, ಮಾತನಾಡುವುದು, ಸೌಜನ್ಯ ತೋರಿಸುವುದರಲ್ಲಿ,  ಬೇರೆಯವರಿಗಿಂತ ವಿಭಿನ್ನ ಎನ್ನುವುದನ್ನು ಕಂಡುಹಿಡಿಯಬಹುದು ಎಂದರು.ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳನ್ನು ಶಾಲಾ ಕಾಲೇಜುಗಳಲ್ಲಿ,  ಸೇವೆಗಾಗಿ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ, ಅವರ ಜೀವನವನ್ನು ಧೈರ್ಯವಾಗಿ ಎದುರಿಸುವುದಕ್ಕೆ ಸಿದ್ಧತೆ ಮಾಡಿಕೊಟ್ಟಿರುತ್ತದೆ ಎಂದರು.ಜಿಲ್ಲಾ ಸಂಘಟನೆಕರಾದ ಜಿ.ಬಿ. ಪಾಟೀಲ್ ರವರು ಮಾತನಾಡಿ ಸ್ಕೌಟ್ಸ್ ಅಂಡ್ ಗೈಡ್ಸ್ ನ 9 ಸದ್ಗುಣಗಳನ್ನ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಮೂಡಿಬರುತ್ತದೆ ಎಂದರು.