ಇ-ಸ್ಟ್ಯಾಂಪ್ ಕೌಂಟರ್ ಗೆ ಚಾಲನೆ

ಸಂಜೆವಾಣಿ ವಾರ್ತೆ
ದಾವಣಗೆರೆ.; ನಗರದ ದೇವರಾಜ ಅರಸು ಬಡಾವಣೆಯ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಸಭಾ ಭವನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎಂ. ಹೆಗಡೆ ಅವರು ವಕೀಲರ ಸಹಕಾರ ಸಂಘದ ವತಿಯಿಂದ ಆರಂಭಿಸಲಾಗಿರುವ ಸ್ಟೇಷನರಿ ಸಾಮಗ್ರಿ ಹಾಗೂ ಇ- ಸ್ಟ್ಯಾಂಪ್ ಮಾರಾಟ ಕೌಂಟರ್ ಉದ್ಘಾಟಿಸಿದರು.ಈ ವೇಳೆ ಸಹಕಾರ ಸಂಘದ ಅಧ್ಯಕ್ಷ ಹೆಚ್. ದಿವಾಕ‌ರ್, ಉಪಾಧ್ಯಕ್ಷ ಡಿ.ಹೆಚ್.ಗವಿಯಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್‌. ಅರುಣ್‌ಕುಮಾ‌ರ್, ಉಪಾಧ್ಯಕ್ಷ  ಬಸವರಾಜ್‌, ಕಾರ್ಯದರ್ಶಿ ಎಸ್.ಬಸವರಾಜ್‌, ಸಹಕಾರ್ಯದರ್ಶಿ ಎ.ಎಸ್ ಬಸವರಾಜ್ ಮತ್ತು ಸಂಘದ ನಿರ್ದೇಶಕರು ಇದ್ದರು.