ಪ್ರಯೋಗ – ಪ್ರಾತ್ಯಕ್ಷಿಕೆ ಮೂಲಕ ವಿಜ್ಞಾನ ದಿನಾಚರಣೆ

ಸಂಜೆವಾಣಿ ವಾರ್ತೆ
ಮಲೇಬೆನ್ನೂರು.; ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಪಟೇಲ್ ಬಸಪ್ಪ ಎಜುಕೇಷನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ  ಹತ್ತು ಹಲವು ವಿಜ್ಞಾನ ಪ್ರಯೋಗ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಅಂತರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು.ಸುಮಾರು 20 ಕ್ಕೂ ಅಧಿಕ ವಿಜ್ಞಾನ ದ ಪ್ರಯೋಗ ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಪ್ರಾಯೋಗಿಕವಾಗಿ ವಿವರಿಸಿದರು.  10 ನೇ ತರಗತಿಯ ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿ ಪ್ರದರ್ಶಿಸಿದ  ಛತ್ರಿಯಲ್ಲಿ ಸೋಲಾರ್ ವಿದ್ಯುತ್ ಬ್ಯಾಟರಿ ಹಾಗೂ ಸೋಲಾರ್ ಪ್ಲೇಟ್ ಅಳವಡಿಸಿ  ಫ್ಯಾನ್ ತಯಾರಿಸುವ ವಿಧಾನ ಅತ್ಯಾ ಕರ್ಷಕ ವಾಗಿತ್ತು. ಉಳಿದಂತೆ 4ನೇ ತರಗತಿಯ ಗೌರಿಕಾ ಮೇಲ್ಮೈ ಒತ್ತಡದ ಬಗ್ಗೆ, 7ನೇ ತರಗತಿಯ ಯಶಸ್ವಿನಿ ಎನ್.ಎಸ್ ತೇಲುವಿಕೆ ಬಗ್ಗೆ, 4ನೇ ತರಗತಿಯ ಸೈಯದಾ ಥೆಹ್ರೀಮ್  ನಿಂಬೆ ಮೂಲಕ ಜ್ವಾಲಾಮುಖಿಯ ಬಗ್ಗೆ , 9 ನೇ ತರಗತಿಯ ನಿದಾ ಸಮ್ರೀನ್ ನ್ಯೂಟನ್ ಡಿಸ್ಕ್ ಬಗ್ಗೆ,  6ನೇ ತರಗತಿಯ ಮದೀಹ ಖಾನುಮ್ ಉಪ್ಪಿನ ದ್ರಾವಣದಲ್ಲಿ ನೀರಿನ ಸಾಂದ್ರತೆ ಬಗ್ಗೆ,  6 ನೇ ತರಗತಿಯ ಮಾನ್ಯ ಜಿಪಿ ಗ್ರ್ಯಾಫೈಟ್ ಮೂಲಕ ವಿದ್ಯುತ್ ತಯಾರಿ ಬಗ್ಗೆ, 6 ನೇ ತರಗತಿಯ ರಿದಾ ಸಮ್ರೀನ ಕಂಪಾಸ್ ಬಗ್ಗೆ,  4 ನೇ ತರಗತಿಯ ಹುದಾ ಫಹ್ರಿನ್ ನೃತ್ಯ ಪಾಪ್‌ಕಾರ್ನ್ ಬಗ್ಗೆ, 8 ನೇ ತರಗತಿಯ ತರುಣ್ ಕೆಜಿ ನೀರಿನ ಕಾರಂಜಿ ಕುರಿತು, 7 ನೇ ತರಗತಿಯ ಕಿಶನ್ ಕುಮಾರ್ ಸಿಎಸ್ ಜೀರ್ಣಾಂಗ ವ್ಯವಸ್ಥೆ ಬಗ್ಗೆ,  4 ನೇ ತರಗತಿಯ ಧನುಷ್ ನ್ಯೂಟನ್‌ನ ಲೋಲಕದ ಕುರಿತು ಹಾಗೂ 8 ನೇ ತರಗತಿಯ ಹರ್ಷ ಉಪ್ಪು ನೀರು ಮೂಲಕ ವಿದ್ಯುತ್ ಕುರಿತಂತೆ ಪ್ರಯೋಗ ಮಾಡಿ ಪ್ರದರ್ಶಿಸಿ ವಿವರಿಸಿದರು .ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಜಿ ಓ ಅವರು ಮಾತನಾಡಿ ವಿಜ್ಞಾನ ದಿನಾಚರಣೆಯ ಮಹತ್ವ,  ಹಿನ್ನೆಲೆ, ರಾಮನ್ ಎಫೆಕ್ಟ್ ಸೇರಿದಂತೆ ಇತರೆ ವಿಷಯಗಳ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರಾದ ಶಶಿಧರ್ ಎಸ್,  ಗಂಗಾಧರ ಬಿ ಎಲ್ ನಿಟ್ಟೂರ್, ಶಿಕ್ಷಕಿಯರಾದ ಕವಿತಾ ಕೊಮಾರನಹಳ್ಳಿ, ಜೆ ವಿ ಲಕ್ಷ್ಮೀದೇವಿ, ಜಯಲಕ್ಷ್ಮಿ,  ಭಾಗ್ಯ ಪ್ರಸನ್ನ, ಸಂಗೀತ, ಶ್ವೇತ ಬಸವನ ಕೋಟೆ, ಕುಸುಮ ಹಾಗೂ ಸಂಸ್ಥೆಯ 1 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳು ಹಾಜರಿದ್ದರು.