ಮಾ.2 ರಂದು ಡಿ.ಎಸ್.ಎಸ್  ಗ್ರಾಮಶಾಖೆ ನಾಮಫಲಕ ಉದ್ಘಾಟನೆ

ಸಂಜೆವಾಣಿ ವಾರ್ತೆ
ಜಗಳೂರು.:-ತಾಲೂಕಿನ ಸೂರಡ್ಡಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಸ್ಥಾಪಿತ) ಗ್ರಾಮ ಶಾಖೆ ಮಾರ್ಚ್ 2 ಶನಿವಾರದಂದು ನಾಮಫಲಕ ಉದ್ಘಾಟನೆ ಗೊಳ್ಳಲಿದೆ ಎಂದು ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಈ ಕಾರ್ಯಕ್ರಮವನ್ನು ಶಾಸಕ ಬಿ‌.ದೇವೇಂದ್ರಪ್ಪ  ಉದ್ಘಾಟಿಸಲಿದ್ದು.ಹಿರಿಯೂರು ಆದಿಜಾಂಭವ ಮಹಾ ಸಂಸ್ಥಾನ ಕೋಡಿಹಳ್ಳಿ ಪೀಠದ ಶ್ರೀ.ಷಡಕ್ಷರಿ ಮುನಿ ಸ್ವಾಮೀಜಿ,‌ಚಿತ್ರದುರ್ಗದ ಮಾದರ ಗುರುಪೀಠ ಶ್ರೀ.ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ದಿವ್ಯಸಾನಿಧ್ಯ  ವಹಿಸಲಿದ್ದಾರೆ.ಸಂಸದ ಜಿ.ಎಂ.ಸಿದ್ದೇಶ್ವರ್,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ ನಾಮಫಲಕ ಅನಾವರಣಗೊಳಿಸಲಿದ್ದಾರೆ.ಭಾವಚಿತ್ರಕ್ಕೆ ಎಚ್.ಪಿ. ರಾಜೇಶ್,ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ.ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೇಟ್ ಆಕಾಂಕ್ಷಿಗಳಾದ ವಿನಯ್ ಕುಮಾರ್ ಬಿ.ಕಕ್ಕರಗೊಳ್ಳ,ಕಲ್ಲೇಶ್ ರಾಜ್ ಪಟೇಲ್ ಅ ವರು ಉಪಸ್ಥಿತರಿರುತ್ತಾರೆ.ಡಿ.ಎಸ್.ಎಸ್  ತಾಲೂಕು ಸಂಚಾಲಕ ಕುಬೇಂದ್ರಪ್ಪ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಬಿಜೆಪಿ ಮುಖಂಡ ಕೊಟ್ರೇಶ್,ಡಿ.ಎಸ್.ಎಸ್  ಜಿಲ್ಲಾ ಸಂಚಾಲ ಕರಾದ ಕುಂದುವಾಡ ಮಂಜುನಾಥ್,ಮುಖಂಡರಾದ ಶಂಭುಲಿಂಗಪ್ಪ,ಕಲ್ಲೇರುದ್ರೇಶ್,ಬಿಸ್ತುವಳ್ಳಿ ಬಾಬು,ಪಲ್ಲಾ ಗಟ್ಟೆ ಮಹೇಶ್,ಅನಿತ್ ಕುಮಾರ್,ವಕೀಲ ಹನುಮಂತ ಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಬಸವಾಪುರ ರವಿಚಂದ್ರ, ಎ.ಎಂ.ಮರುಳಾರಾಧ್ಯ,ಗ್ಯಾಸ್ ಏಜೆನ್ಸಿ ಮಾಲಿಕ ಓಬಣ್ಣ, ಪ.ಪಂ ಸದಸ್ಯರಾದ ದೇವರಾಜ್,ನಿರ್ಮಲ ಕುಮಾರಿ, ಸೇರಿದಂತೆ ವಿವಿಧ ಗಣ್ಯರು,ಗ್ರಾ.ಪಂ ಅಧ್ಯಕ್ಷರು, ಸದಸ್ಯರುಗಳು ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.