ಅಂಗನವಾಡಿ ಕಾರ್ಯಕರ್ತೆಯರು ಸ್ವಯಂ ಸೇವಕರಾಗಿ ನಿಯೋಜನೆ
ಸಂಜೆವಾಣಿ ವಾರ್ತೆ
ಜಗಳೂರು:- ಗ್ಯಾರಂಟಿ ಯೋಜನೆ ಸಮೀಕ್ಷೆಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಸ್ವಯಂಸೇವಕರ ನ್ನಾಗಿ ನಿಯೋಜಿಸಿರುವುದನ್ನು ಖಂಡಿಸಿ ಎಐಟಿಯುಸಿ ತಾಲೂಕು ಸಮಿತಿ ವತಿಯಿಂದ ಶಾಸಕ ಬಿ.ದೇವೇಂದ್ರಪ್ಪ  ಅವರ ಪುತ್ರ ಕೀರ್ತಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ‌ ಸಂಘದ ತಾಲೂಕು ಗೌರವ ಅಧ್ಯಕ್ಷೆ ಭರಮಕ್ಕ ಮಾತನಾಡಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ,ಗೃಹ ಜ್ಯೋತಿ,ಶಕ್ತಿಯೋಜನೆ,ಯುವನಿಧಿ,ಅನ್ನಭಾಗ್ಯ ಯೋಜನೆ ಗಳ ಸಮರ್ಪಕ ಜಾರಿಗೊಂಡ ಸಮೀಕ್ಷೆ ವರದಿ ತಯಾರಿ ಸಲು 120 ದಿನಗಳ ಕಾಲದವರೆಗೆ ಕೇವಲ 1 ಸಾವಿರ ರೂಪಾಯಿ ಹೆಚ್ಚುವರಿ ಸಂಭಾವನೆಗೆ ಹೊಣೆಗಾರಿಕೆ ನೀಡಿರುವುದು.ಒಟ್ಟಿಗೆ ಜವಾಬ್ದಾರಿ ಹೆಚ್ಚಾಗುವುದಲ್ಲದೆ. ಒಟ್ಟಿಗೆ ನಿಭಾಯಿಸುವುದು ಕಷ್ಟಕರವಾಗುತ್ತದೆ.₹15000 ಗೌರವ ಧನ 6 ನೇ ಗ್ಯಾರಂಟಿ ಪ್ರಧಾನವಾಗಿತ್ತು.ಆದರೆ ಕಾಂಗ್ರೆಸ್ ಆಡಳಿತ ಸರಕಾರ ಕೇವಲ ₹10000 ಗೌರವ ಧನ ನೀಡುತ್ತಿದೆ.ಅಂಗನವಾಡಿ ಕಾರ್ಯಕರ್ತೆಯರಿಗೆ ಇದರಿಂದ ಔದ್ಯಮಿಕ ಭದ್ರತೆಯಿಲ್ಲ.ಅಲ್ಲದೆ ಸ್ವಯಂ ಸೇವಕರನ್ನಾಗಿ ನಿಯೋಜಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವುದು ಆಡಳಿತಾತ್ಮಕ ಕ್ರಮವಲ್ಲ ಎಂದು ಮನವಿ ಮಾಡಿದರು.ಶಾಸಕ ಬಿ.ದೇವೇಂದ್ರಪ್ಪ ಪುತ್ರ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ ಶಾಸಕ ಬಿ.ದೇವೇಂದ್ರಪ್ಪ ವಿಧಾನ ಸಭಾ ಅಧಿವೇಶನಕ್ಕೆ ಬೆಂಗಳೂರಿಗೆ ತೆರಳಿದ್ದು.ಆಗಮಿಸಿ ದ ನಂತರ ನಿಮ್ಮಮನವಿ ಪತ್ರವನ್ನು ಯಥಾವತ್ತಾಗಿ  ಗಮನಕ್ಕೆ‌ ತರಲಾಗುವುದು.ತಮ್ಮ ಬೇಡಿಕೆಯನ್ನು ಬಗೆಹರಿ ಸಲು ಶಿಫಾರಸ್ಸಿಗೆ ನಾನು ಮನವರಿಕೆ ಮಾಡಿ ಕೊಡುವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್,ಸಹಕಾರ್ಯದರ್ಶಿ ಹಾಲಮ್ಮ, ಉಪಾಧ್ಯಕ್ಷೆ ಗೌರಮ್ಮ,ವೀರಣ್ಣ ಸೇರಿದಂತೆ ಇದ್ದರು.