ಭಾರತ ಸೇವಾ ರತ್ನ ಎಕ್ಸಲೆನ್ಸ್ ರಾಷ್ಟ್ರೀಯ ಪ್ರಶಸ್ತಿ

ಸಂಜೆವಾಣಿವಾರ್ತೆ
ಹರಪನಹಳ್ಳಿ;ತಾಲೂಕಿನ ನಂದಿಬೇವೂರು ಗ್ರಾಮದ ಕೃಷಿಕ, ಜ್ಯೋತಿಷ್ಯ, ಪಾರಂಪರಿಕ ವೈದ್ಯ ಹಾಗೂ ರಂಗ ಕಲಾವಿದ ಸಿ.ಎಂ.ಪAಚಾಕ್ಷರಯ್ಯನವರಿಗೆ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿಯಿಂದ ಭಾರತ ಸೇವಾ ರತ್ನ ಎಕ್ಸಲೆನ್ಸ್ ರಾಷ್ಟಿçÃಯ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ. ಇತ್ತೇಚೆಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿ.ಎಂ.ಪAಚಾಕ್ಷರಯ್ಯನವರ ಆಯುರ್ವೇದ, ಜ್ಯೋತಿಷ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಭಾರತ ಸೇವಾ ರತ್ನ ಎಕ್ಸಲೆನ್ಸ್ ರಾಷ್ಟಿçÃಯ ರಾಷ್ಟಿçÃಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪಂಚಾಕ್ಷರಯ್ಯನವರು ನಾಲ್ಕು ದಶಕಗಳಿಂದ ಕಲಾ ವೈದ್ಯ, ಜ್ಯೋತಿಷ್ಯ ಶಾಸ್ತçವನ್ನು ನೋಡಿ, ರೋಗಿಗಳಿಗೆ ವನಸ್ಪತಿ ಔಷಧಿಗಳನ್ನು ನೀಡುತ್ತಾ ಬಂದಿದ್ದಾರೆ, ಇದರ ಜೊತೆಗೆ ಗ್ರಾಮದಲ್ಲಿ ಯಕ್ಷಗಾನವನ್ನು ಪರಿಚಯಿಸುವ ಕೆಲಸ ಮಾಡುತ್ತಾ ಬಂದಿದ್ದು, ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ವಿ.ವಿ.ಯಿಂದ ಗೌರವ ಡಾಕ್ಟರೇಟ್ ಸಹ ಪಡೆದಿದ್ದರು.