ಪ್ರತಿಯೊಂದು ಭಾಷೆಯು ಒಂದು ವರ ವಿದ್ದಂತೆ : ಸದಾನಂದ ಇರನಕೇರಿ
ಇಂಡಿ : ಸೆ.16:ಪ್ರತಿಯೊಂದು ಭಾಷೆಯು ಒಂದೊಂದು ವರವಿದ್ದಂತೆ ಆದ್ದರಿಂದ ಎಲ್ಲ ಭಾಷೆಯನ್ನು ಪ್ರೀತಿಯಿಂದ ಬಳಸಿದರೆ ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ ಕಾರಣ ತಾವೆಲ್ಲರೂ ಎಲ್ಲ ಭಾಷೆಯನ್ನು ಚೆನ್ನಾಗಿ ಕರಗತ ಮಾಡಿಕೊಳ್ಳಬೇಕು ಎಂದು ಮಕ್ಕಳ ಸಾಹಿತ್ಯ ತಾಲೂಕ ಅಧ್ಯಕ್ಷ ಸದಾನಂದ ಎಸ್ ಇರನಕೇರಿ ಹೇಳಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಮತಿ ಶಾಲಿನಿ ಮಾಣಿಕ್ ಚಂದ್ ದೋಶಿ ಮಹಿಳಾ ಪ ಪೂ ಕಾಲೇಜ್ ನಲ್ಲಿ ಭಾರತ ಮಾತೆಯ ಫೆÇೀಟೋ ಪೂಜೆ ಮಾಡುವುದರ ಮೂಲಕ ಹಿಂದಿ ಭಾಷೆಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸುತ್ತಾ ಡಾ. ವಿ ಎ ಕೊರ್ವಾರ್ ಜಿ ಆರ್ ಜಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಸಾಧನೆ ಮಾಡಿದ ಸಾಧಕರ ವಿಚಾರವನ್ನು ತಿಳಿದುಕೊಂಡು ತಾವು ಕೂಡ ಸಾಧಕರಾಗಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಅಂಗವಿಕಲರು ಸಹಿತ ಸಾಧನೆ ಮಾಡುತ್ತಿದ್ದಾರೆ ಹೀಗಾಗಿ ನೀವು ಸಹಿತ ಅಂತ ಸಾಧನೆಯನ್ನು ಮಾಡಿ ನಮ್ಮ ಕಾಲೇಜಿಗೆ ಮತ್ತು ತಂದೆ ತಾಯಿಗಳಿಗೆ ಹೆಸರು ತರಬೇಕೆಂದು ಹೇಳಿದರು . ಇದೇ ಸಂದರ್ಭದಲ್ಲಿ ಶಾಂತೇಶ್ವರ ಪಿಯು ಕಾಲೇಜಿನ ಹಿಂದಿ ಉಪನ್ಯಾಸಕರು ಶ್ರೀ ಪಂಡಿತ್ ಸರ್ ಮಾತನಾಡುತ್ತಾ ಹಿಂದಿ ಭಾಷೆಯನ್ನು ನಾವೆಲ್ಲರೂ ಕಲಿಯುವುದರ ಜೊತೆಗೆ ಮಾತನಾಡುವುದನ್ನು ಕಲಿಯಬೇಕು . ಭಾಷೆ ನಿಂತ ನೀರಲ್ಲ ಸದಾ ಹರಿಯುವ ನೀರಿದ್ದಂತೆ ಹಿಂದಿ ಭಾಷೆ ಕಲಿಯುವುದರಿಂದ ನಾವು ಬೇರೆ ಬೇರೆ ರಾಜ್ಯಗಳಿಗೆ ಅಥವಾ ದೇಶಗಳಿಗೆ ಹೋದಾಗ ಮಾತನಾಡವುದರ ಮೂಲಕ ನಮ್ಮ ಅಭಿಮಾನವನ್ನು ಹೊಂದಿರಬೇಕು. ಹಿಂದಿಯು ಪ್ರಪಂಚದ ನಾಲ್ಕನೆಯ ಭಾಷೆಯಾಗಿದೆ. ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಶ್ರೀ ವಿಜು ರಾಠೋಡ್ ಮಾತನಾಡುತ್ತಾ ಸರಳಭಾಷೆಯಾದ ಹಿಂದಿ ನಾವೆಲ್ಲರೂ ಶ್ರದ್ದೆಯಿಂದ ಕಲಿತು ರಾಷ್ಟ್ರ ಅಭಿಮಾನವನ್ನ ಬೆಳೆಸಿಕೊಳ್ಳಬೇಕು. ಹಿಂದಿ ಕಲಿತ ವಿದ್ಯಾರ್ಥಿನಿಯರು ಬೇಗ ವೃತ್ತಿಯನ್ನು ಪ್ರಾರಂಭಿಸುತ್ತಾರೆ ಎಂದರು. ಪ್ರಾಚಾರ್ಯರು ಶ್ರೀ ಎ ಬಿ ಪಾಟೀಲ್, ಮುಖ್ಯ ಅತಿಥಿಗಳಾಗಿ ಶ್ರೀ ಆರ್ ಎಸ್ ಬಿರಾದಾರ್ ಸರ್ ಅತಿಥಿಗಳಾಗಿ ಶ್ರೀ ಎಸ್ ಬಿ ಹಡಪದ ಶ್ರೀ ರಮೇಶ್ ಪೂಜಾರಿ ಶ್ರೀ ಆರ್ ವಿ ಅಂಗಡಿ ಶ್ರೀಮತಿ ಫರಹ ಆರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಭಾಷಣ .ಹಾಡು ಹಾಡಿದರು. ಪ್ರಥಮ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು, ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ನಿರೂಪಿಸಿದರು.