ಈದ್-ಮಿಲಾದ್ ಹಿನ್ನೆಲೆ ರೋಗಿಗಳಿಗೆ ಹಣ್ಣು, ಸಿಹಿ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೧೬; ಈದ್ ಮಿಲಾದ್ ಹಬ್ಬದ ಅಂಗವಾಗಿ ಮೌಲಾನ ಆಜಾದ್ ಅಸೋಸೀಯೇಷನ್ ವತಿಯಿಂದ ದಾವಣಗೆರೆ ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು,ಹಂಪಲು, ಸಿಹಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿರಕ್ತ ಮಠದ ಶ್ರೀ ಬಸವಪ್ರಭುಸ್ವಾಮಿಜಿ ರೋಗಿಗಳಿಗೆಗೆ ಹಣ್ಣು, ಸಿಹಿ ವಿತರಿಸಿದರಲ್ಲದೇ ಅಸೋಸಿಯೇಷನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರುಈ ವೇಳೆ ಮೌಲಾನ ಆಜಾದ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಸಿ.ಆರ್.ನಸೀರ್ ಅಹಮ್ಮದ್ ಅವರು ಮೌಲಾನಾ ಶಬಲಮ್, ಮಹಮ್ಮದ್ ಮಜೀದ್ ಸೇರಿದಂತೆ ಇತರರಿದ್ದರು.