ಹಬೋಹಳ್ಳಿ : ಮೆರವಣಿಗೆಯೊಂದಿಗೆ ಈದ್ ಮಿಲಾದ್ ಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.16 ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಮೆರವಣಿಗೆ ನಡೆಸುವ ಮೂಲಕ ಆಚರಿಸಿದರು  ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಾರೆ.
ಮಹಮ್ಮದ್ ಪೈಗಂಬರ್ ಏಕತೆ   ಸಹಿಷ್ಣತೆ ಹಾಗೂ ಸಹೋದರತೆಗೆ ಒತ್ತುಕೊಟ್ಟರು. ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದವರು. ಮಹಮ್ಮದ್ ರ ಶಾಂತಿ ಸಹ ಬಾಳ್ವೆ, ಸಂದೇಶವು ಧರ್ಮಗಳ ನಡುವೆ ಸಂವಾದ ಮತ್ತು ಸಹಕಾರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯುದ್ಧದ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಕೊಲ್ಲಬಾರದು ಎಂದು ಸಾರಿದವರು
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ತೆಲಗಿ ಇಸ್ಮಾಯಿಲ್, ತತ್ತಿ ಕಾಸಿಂ, ಕೆಜಿಎನ್ ಅಲ್ಲಾಭಕ್ಷಿ, ಉಲವತ್ತಿ ಬಾಬುವಲಿ, ಅಜೀಜುಲ್ಲಾ,ಪೀರ್ ಸಾಬ್, ಕರಿ  ಇಸ್ಮಾಯಿಲ್ ,ಕೋಳಿ ನಜೀರ್, ದಾದಾಪೀರ್, ಜಂದಿಸಾಬ್, ಇಕ್ಬಾಲ್, ನಜೀರ್, ಆಟೋ ರಾಜ, ಹುಸೇನ್ ಸಾಬ್, ಕೆಜಿಎನ್ ದಾದು,, ಮುನ್ನಾವರ, ಅಕ್ಬರ್, ಬಾಬು ಸಾಬ್, ಮಹಮದ್, ಜಾಹಿಂಗೀರ್, ಇತರರಿದ್ದರು.