ತುಂಗಭದ್ರಾ ನದಿ ಹಿನ್ನೀರಿಗೆ  ಶಾಸಕರಿಂದ ಬಾಗಿನ ಅರ್ಪಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.16 ತಾಲೂಕಿನ ತಂಬ್ರಹಳ್ಳಿ  ಶ್ರೀ ಬಂಡೆ ರಂಗನಾಥ ದೇವಸ್ಥಾನ ಬಳಿ ಇರುವ ತುಂಗಭದ್ರ ನದಿ ಹಿನ್ನೀರಿಗೆ ಶಾಸಕ ಕೆ ನೇಮಿರಾಜ್ ನಾಯ್ಕ್ ಭಾನುವಾರ ಬಾಗಿನ ಅರ್ಪಿಸಿದರು.
ನಂತರ ಬಂಡೆ ರಂಗನಾಥ ದೇವಸ್ಥಾನದ ಆವರಣದಲ್ಲಿ  ರೈತರೊಂದಿಗೆ ಸಮಸ್ಯೆಗಳ ಬಗ್ಗೆ ಆಲಿಸಿ ಮಾತನಾಡಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು. ಮುಂದಿನ ದಿನಗಳಲ್ಲಿ ಕೆಕೆಆರ್ ಡಿ ಬಿ, ಡಿಎಂಎಫ್ ಹಾಗೂ ಕೆಎಂಇಆರ್ ಸಿ ಯೋಜನೆಗಳ ಅನುದಾನದಡಿ  ಕ್ಷೇತ್ರದಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ರಾಜ್ಯ ಸರ್ಕಾರದ ಅನುದಾನದ ಕೊರತೆಯಿಂದ ಕೇಂದ್ರ ಸರ್ಕಾರದ ನಿಧಿ ಬಳಸಿಕೊಂಡು ಅಭಿವೃದ್ಧಿ ಕೆಲಸಕ್ಕೆ ಮುಂದಾಗುವೆ. ಕ್ಷೇತ್ರದ ಚೆಕ್ ಡ್ಯಾಂ, ಕೆರೆಗಳು ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ರೈತ ಮುಖಂಡ ಚಂದ್ರಶೇಖರ್ ಪಾಟೀಲ್ ಮಾತನಾಡಿ ತೆಲುಗೋಳಿ ಸೇರಿದಂತೆ ವಿಭಾಗದಲ್ಲಿ ವಿದ್ಯುತ್ ಕೊರತೆಯಾಗುತ್ತಿದ್ದು ಕೂಡಲೇ ಸಬ್ ಸ್ಟೇಷನ್ ಸ್ಥಾಪಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು ಯೋಜನೆ ಜಾರಿಯಲ್ಲಿದ್ದು ಟೆಂಡರ್ ಕರೆಯಲಾಗಿದೆ ಎಂದರು.
 ಈ ವರ್ಷ ಉತ್ತಮ ಮಳೆಯಾಗಿದ್ದು ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ತಂಬ್ರಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳು ಯಥಾ ನೀರಾವರಿ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಬಂಡೆರಂಗನಾಥ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ನಂದಿಪುರದ ಶ್ರೀಡಾ. ಮಹೇಶ್ವರ ಸ್ವಾಮೀಜಿ, ಅಧ್ಯಕ್ಷ ಪಿ ಲಕ್ಷ್ಮಣ ಧರ್ಮ ಕರ್ತರಾದ ಉದಯ್ ಭಾಸ್ಕರ್, ಮುಖಂಡರಾದ ವೈ ಮಲ್ಲಿಕಾರ್ಜುನ ಮೈನಹಳ್ಳಿ ಕೊಟ್ರೇಶ್ ಬಣಕಾರ್ ಅರಣ ಎಚ್ ಎಮ್ ಕರಬಸಯ್ಯ ಗಿರಿಧರ್ ರೆಡ್ಡಿ ದೇವಿ ಪ್ರಸಾದ್ ಮೂಲೆಮನೆ ರವಿ ಮಂಜುನಾಥ್ ರೆಡ್ಡಿ ಕಿತ್ತೂರು ಮಾರುತಿ ಮಡಿವಾಳರ ಆನಂದಪ್ಪ  ಹನುಮಂತಪ್ಪ ರಾಜಶೇಖರ ರೆಡ್ಡಿ, ನಿವೃತ್ತ ಇಒ ವೆಂಕೋಬಪ್ಪ, ಪುರಸಭೆಯ ಸದಸ್ಯ ದೀಪಕ್ ಕಠಾರೆ, ಮುಖಂಡರಾದ ಚಿತ್ತವಾಡಗಿ ಪ್ರಕಾಶ್ ಮೈನಹಳ್ಳಿ ಸೋಮಶೇಖರ್, ಎಲ್ಐಸಿ ರುದ್ರೇಶ್ ಬ್ಯಾಟಿ ನಾಗರಾಜ್, ಬಿಜಿ ಬಡಿಗೇರ್, ಹೋಟೆಲ್ ಸಿದ್ದರಾಜು, ರಾಜು ಪಾಟೀಲ್ ಇತರರಿದ್ದರು