ರಿಪೇರಿಯಾದ ಟಿವಿ ನಾಳೆ ಕೊಡ್ತಾರಂತೆವಿಟಮಿನ್ ಮಾತ್ರೆ ಬೇಕೆಂದ ದರ್ಶನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.16: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿನ ಸೆಂಟ್ರಲ್ ಜೈಲಿನಲ್ಲಿರುವ ನಟ  ದರ್ಶನ್‌ಗೆ  ನಾಳೆ ರಿಪೇರಿಯಾಗಿರುವ ಹಳೇ ಟಿವಿ ಕೊಡ್ತಾರಂತೆ. ಈ ಮಧ್ಯೆ ದರ್ಶನ್ ತನ್ನ ದೇಹದ ನಿರ್ವಹಣೆಗೆ ವಿಟಮಿನ್ ಮಾತ್ರೆ ಬೇಕೆಂದು ಜೈಲಿನ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರಂತೆ.
ಸಮಯ ಕಳೆಯಲು ಮತ್ತು ದೇಶದ ಆಗು ಹೋಗುಗಳನ್ನು ತಿಳಿಯಲು ನಟ ದರ್ಶನ್ ತಮ್ಮ ಸೆಲ್ ಗೆ ಟಿವಿ ಬೇಕೆಂದು ಕೇಳಿದ್ದರು. ಅದಕ್ಕೆ ಹಳೇ ಟಿವಿಯೊಂದನ್ನು ನೀಡಿತ್ತು. ಆದರೆ ಅದು ಎರಡೇ ದಿನದಲ್ಲಿ ಕೆಟ್ಟು ಹೋಗಿತ್ತು.  ಇದರಿಂದ ಟಿವಿ ಇಲ್ಲದೆ ಬೇಸರ ವ್ಯಕ್ತಪಡಿಸಿದ್ದ ನಟ ದರ್ಶನ್ ಜೈಲು ಸಿಬ್ಬಂದಿಗೆ ಟಿವಿ ಗಾಗಿ ಧಮಕಿ ಹಾಕಿದ್ದರಂತೆ.
ಅದಕ್ಕಾಗಿ  ಕೆಲ ದಿನ ಸತಾಯಿಸಿರುವ ಜೈಲು ಅಧಿಕಾರಿಗಳು ಈಗ ರಿಪೇರಿ ಮಾಡಲಾಗಿರುವ ಟಿವಿಯನ್ನು ನಾಳೆ ನೀಡ್ತಾರಂತೆ.
ಈ ಮಧ್ಯೆ ದರ್ಶನ್ ಮತ್ತೊಂದು ಬೇಡಿಕೆಯನ್ನು ಇಟ್ಟಿದ್ದಾನಂತೆ. ಅದೇನಂದ್ರೆ ತಮ್ಮ ಬಾಡಿಯನ್ನು ಮೇಂಟೇನ್ ಮಾಡಲು ವಿಟಮಿನ್ ಮಾತ್ರೆಗಳು ಬೇಕಂತ.
ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಭೇಟಿಗೆ  ಜೈಲಿಗೆ ಬಂದಾಗ ಡ್ರೈಪ್ರೂಟ್ ಜೊತೆ ವಿಟಮಿನ್ ಮಾತ್ರೆ ಸಹ ತಂದಿದ್ದರಂತೆ. ಆದರೆ ಜೈಲು ಅಧಿಕಾರಿಗಳನ್ನು ಅವನ್ನು ದರ್ಶನ್ ಗೆ  ನೀಡಲಿಲ್ಲವಂತೆ.
ಈಗ ಜೈಲಿನಲ್ಲಿ ವಿಟಮಿನ್ ಮಾತ್ರೆ ಇಲ್ಲದೆ ಎರೆಡು ವಾರ ಕಳೆಯುತ್ತಿರುವ ದರ್ಶನ್ ವಿಟಮಿನ್ ಮಾತ್ರೆ ಬೇಕೆ ಬೇಕು ಎನ್ನುತ್ತಿದ್ದಾನಂತೆ. ಜೈಲು ಅಧಿಕಾರಿಗಳು ಏನ್ ಮಾಡ್ತಾರೋ..
ವಕೀಲರ ಪತ್ರ ಬಂತು:
ಮೊನ್ನೆ ಅಪರಿಚತೊರಬ್ಬರಿಂದ ಹನುಮಾನ್ ಚಾಲೀಸ್ ಬುಕ್ ದರ್ಶನ್ ಗೆ ಪಾರ್ಸ್ ನಲ್ಲಿ ಬಂದಿತ್ತು. ನಿನ್ನೆ ವಕೀಲರೊಬ್ಬರ ಹೆಸರಿನಲ್ಲಿ ಮತ್ತೊಂದು ಪಾರ್ಸಲ್ ಬಂದಿದೆಯಂತೆ. ಇದು ವಕೀಲರ ಹೆಸರು ಹೊಂದಿರುವುದರಿಂದ ಈ ಪಾರ್ಸಲ್ ನ್ನು ನೇರವಾಗಿ ದರ್ಶನ್ ಗೆ ನೀಡಲಾಗಿದೆಯಂತೆ.