ಕೋಲಾಚಲಂ ಶ್ರೀನಿವಾಸ್ ರಾವ್ ಪ್ರಶಸ್ತಿ ಸ್ವೀಕರಿಸಿದಟಿ ಹೆಚ್ ಎಂ ಬಸವರಾಜ್
(ಸಂಜೆವಾಣಿ ವಾರ್ತೆ)
ಬಳ್ಳಾರಿ ಸೆ.16:  ನಗರದ  ಬಿಪಿಎಸ್ ಸಿ ಶಾಲೆಯ ಶರಣ ಸಭಾಂಗಣದಲ್ಲಿ ನಿನ್ನೆ ನಡುವೆ ದ  ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‌  52ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಹಾಗೂ ಕಲಾವಿದ ಟಿ. ಹೆಚ್. ಎಂ. ಬಸವರಾಜ್ ಅವರಿಗೆ ತೆಲುಗು ನಾಟಕ ಪಿತಾಮಹ “ಕೋಲಾಚಲಂ ಶ್ರೀನಿವಾಸ್ ರಾವ್” ಪ್ರಶಸ್ತಿ ನೀಡಿ  ಗೌರವಿಸಲಾಯಿತು.
ಕಲ್ಯಾಣ್ ಸ್ವಾಮಿಗಳು, ಡಾ‌ ಎಸ್.ಜೆ.ವಿ.ಮಹಿಪಾಲ್, ಸಂಸ್ಥೆಯ ಅಧ್ಯಕ್ಷ ಶೀಲಾ ಬ್ರಹ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಪಾಲಿಕೆ ಸದಸ್ಯ ಪಿ. ಗಾದೆಪ್ಪ,   ವಕೀಲ ಜನಾರ್ದನ್,  ಎಸ್. ಪನ್ನಾ ರಾಜ್, ರಾಘವರ ಮೊಮ್ಮಗ ರಘುರಾಮ್,  ಅಂಚೆ ಅಧೀಕ್ಷಕ ಚಿದಾನಂದ, ಚೇಂಬರ್ ಆಫ್ ಕಾಮರ್ಸ್ ನ ಹಿರಿಯ ಉಪಾಧ್ಯಕ್ಷ  ಯಶವಂತ್ ರಾಜ್, ಮುಂತಾದವರು ಉಪಸ್ಥಿತರಿದ್ದರು