ಕರ್ನಾಟಕದ ಯುವ ಸಂಗಮ ತಂಡ ಉತ್ತರ ಪ್ರದೇಶಕ್ಕೆ ಪಯಣ
ಕಲಬುರಗಿ:ಮಾ.01:“ಕರ್ನಾಟಕದ ಸಂಸ್ಕøತಿಯ ರಾಯಭಾರಿಗಳಾಗಿ ಒಳ್ಳೇಯ ಹೆಸರು ತನ್ನಿ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಇಂದು ʼಏಕ್ ಭಾರತ ಶ್ರೇಷ್ಠ ಭಾರತʼ ಅಂಗವಾಗಿ ಉತ್ತರ ಪ್ರದೇಶಕ್ಕೆ ಹೊಗುತ್ತಿರುವ 4ನೇ ಆವೃತಿಯ ಯುವ ಸಂಗಮದ ಕರ್ನಾಟಕ ತಂಡವನ್ನು ಬಿಳ್ಕೊಡುವ ಸಂದರ್ಭದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಸಲುವಾಗಿ ಮತ್ತು ಭಾರತೀಯರಲ್ಲಿ ಸಂಸ್ಕೃತಿಕ ಸಾಮರಸ್ಯವನ್ನು ಮೂಡಿಸಲು ಮಾನ್ಯ ಪ್ರಧಾನ ಮಂತ್ರಿಗಳು ʼಏಕ್ ಭಾರತ ಶ್ರೇಷ್ಠ ಭಾರತʼದ ಯುವ ಸಂಗಮ ಯೋಜನೆಯನ್ನು ರೂಪಿಸಿದ್ದಾರೆ. ತಾವು ಕರ್ನಾಟಕ ಮತ್ತು ಸಿಯುಕೆಯ ಪ್ರತಿನಿಧಿಗಳಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದಿರಿ. ಒಳ್ಳೇಯ ಶಿಸ್ತು ಸಂಯಮದಿಂದ ವರ್ತಿಸಿ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಯತ್ತಿಹಿಡಿಯಿರಿ. ಒಂದು ವಾರದ ಪ್ರವಾಸದಲ್ಲಿ ತಾವು ನೋಡಿದ, ಅನುಭವಿಸಿದ ಎಲ್ಲಾ ಸಂದರ್ಭಗಳನ್ನು ಸರಿಯಾಗಿ ಬರೆದುಕೊಳ್ಳಿ ಹಾಗು ಕೊನೆಯಲ್ಲಿ ಅದನ್ನು ಲೇಖನದ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ಕೊಡಿ. ಇದು ಕಲಿಯಲು ಉತ್ತಮ ಅವಕಾಶ ಇದನ್ನು ಸರಿಯಾಗಿ ಬಳಸಿಕೊಳ್ಳಿ. ತಮ್ಮ ಪ್ರಯಾಣ ಸುಖಕರ ಮತ್ತು ಸುರಕ್ಷಿತವಾಗಿರಲಿ. ಎಲ್ಲರೂ ಪರಸ್ಪರ ಕಾಳಜಿ ವಹಿಸಿ” ಎಂದು ಹೇಳಿದರು.
ʼಏಕ್ ಭಾರತ ಶ್ರೇಷ್ಠ ಭಾರತʼದ ಯುವ ಸಂಗಮ ಯೋಜನೆಯ ನೋಡಲ್ ಅಧಿಕಾರಿ ಪೆÇ್ರ. ವೀರೇಶ ಕಸಬೆಗೌಡರ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ “ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದ ಕನಿಷ್ಠ ಒಬ್ಬರಂತೆ 18ರಿಂದ 30 ವಯಸ್ಸಿನೊಳಗಿನ ಒಟ್ಟು 50 ಜನ ಪುರುಷ ಮತ್ತು ಮಹಿಳೆಯರನ್ನು ಆಯ್ಕೆಮಾಡಲಾಗಿದೆ. ನಿಮ್ಮಲ್ಲಿ ಪದವಿ, ಸ್ನಾತಕೊತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಇಂಜಿನಿರಗಳು, ವೈಧ್ಯರು ಹಾಗು ಸಾಮನ್ಯ ನಾಗರಿಕರು ಇದ್ದಾರೆ. ಪ್ರವಾಸದಲ್ಲಿ ತಾವು ಉತ್ತರ ಪ್ರದೇಶ ರಾಜ್ಯದ ರಾಜ್ಯಪಾಲ ಮತ್ತು ಮುಖ್ಯಮಂತ್ರಿಯವರೊಂದಿಗೆ ಸಂವಾದ ಮಾಡಲಿದ್ದಿರಿ. ಅಲ್ಲದೆ ಐಐಟಿ ಕಾನ್ಪುರ, ಅಯೋದ್ಯ, ಲಕನೌ ಮತ್ತು ಕೆಲ ಉಧ್ಯಮಗಳಿಗೆ ಭೇಟಿ ನಿಡಲಿದ್ದಿರಿ. ಐಐಟಿ ಕಾನ್ಪುರ ನಿಮ್ಮ ಇಡಿ ಪ್ರವಾಸವನ್ನು ಆಯೋಜಿಸಿದ್ದು ತಮ್ಮ ಭೇಟಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ತಾವು ಇವತ್ತು ಸಾಯಂಕಾಲ ಇಲ್ಲಿಂದ ಬಿಟ್ಟು ನಾಡಿದ್ದು ಲಕನೌ ತಲುಪಲಿದ್ದು 9ನೇ ತಾರಿಕಿನಂದು ಮರಳಿ ಸಿಯುಕೆ ತಲುಪಲಿದ್ದೀರಿ. ತಾವು ಜವಬ್ದಾರಿಯುತ ಸಿಯುಕೆ ಮತ್ತು ಕರ್ನಾಟಕದ ಪ್ರತಿನಿಧಿಗಳಾಗಿ ನಡೆದುಕೊಳ್ಳಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಯುಕೆಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪೆÇ್ರ. ರವಿಂದ್ರ ಹೆಗಡಿ, ಕಾರ್ಯಕ್ರಮದ ಸಂಯೋಜಕ ಡಾ. ಸಂಗಮೇಶ, ಡಾ. ಮಲ್ಲಿಕಾರ್ಜುನ, ಪೆÇ್ರ. ಈ ಸುಜಾತ ಇದ್ದರು. ಡಾ. ನಿತಿನ ಬಿ ಕಾರ್ಯಕ್ರಮ ನಿರೂಪಿಸಿದರು, ಡಾ. ನಾಕರಾಜ ಧಾರವಾಡ್ಕರ ವಂದಿಸಿದರು.