ಲೋಕ ಕಲ್ಯಾಣದ ಕಾವ್ಯ ರಚಿಸಿದ ಶೈಲಜಾ: ನಾಡೋಜ ಡಾ.ಮನು ಬಳಿಗಾರ್
ಕಲಬುರಗಿ:ಮಾ.01:ಯಾವ ಸಾಹಿತ್ಯದ ಸಂಪರ್ಕವಿಲ್ಲದ ಕಾಲ ದಲ್ಲಿ ಸಾಹಿತ್ಯ ರಚಿಸಿದ್ದು ಸಾಮಾನ್ಯ ಮಾತಲ್ಲ.ಅಕ್ಷರದ ಶಕ್ತಿ ಪ್ರೋತ್ಸಾಹ ತಂದೆಯಿಂದ ಪ್ರೇರಣೆ ಪಡೆದು ಕಾವ್ಯ ರಚಿಸಿದ್ದು ಲೋಕ ಕಲ್ಯಾಣದ ಕಾವ್ಯ ರಚಿಸಿದವರು ಎಂದು ನಾಡೋಜ ಡಾ.ಮನು ಬಳಿಗಾರ ನುಡಿದರು
‌ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ವಿಭಾಗ ಮಾನವಿಕ ಮತ್ತು ಭಾಷಾ ನಿಕಾಯ ಕೇಂದ್ರೀಯ ವಿಶ್ವ ವಿದ್ಯಾಲಯ ಆಶ್ರಯದಲ್ಲಿ ಶೈಲಜಾ ಉಡಚಣ ಸಾಹಿ ತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಅವರ ಕಾವ್ಯ,ವಿಮರ್ಶೆ,ವಚನ,ಗದ್ಯ ಸಾಹಿತ್ಯ ಜೊತೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವೆಂದರು
ಆಶಯ ನುಡಿ ಆಡಿದ ಪ್ರಖ್ಯಾತ ಕವಯತ್ರಿ ಡಾ.ಮಲ್ಲಿಕಾ ಘಙಟಿ ಅವರು ಪುರುಷಪ್ರಧಾನ ಸಂಸ್ಕೃತಿಯಲ್ಲಿ ಇಂದಿಗೂ ನಾವು ಕಡೆಗಣಿಸಿಲ್ಲಪಟ್ಟ ವರು,ಶೈಲಜಾ ಉಡಚಣರುಬಸಾಹಿತ್ಯ ಮತ್ತು ವೃತ್ತಿ ಮತ್ಸರದ ಸಂಕಟದ ನಡುವೆ ಸಾಹಿತ್ಯ ರಚಿಸಿದರು.ಸಾಹಿತ್ಯ ಪ್ರೀತಿ,ಸಹನೆಯ ಮೂಲಕ ಸಾಹಿ ತ್ಯ ರಚಿಸಿದ ಬಹುದೊಡ್ಡ ಕವಯತ್ರಿ. ಸಾಹಿತ್ಯ-ಸಾಂಸ್ಕೃ ತಿಕ ರಾಜಕಾರಣದಿಂದ ಸಿಗಬೇಕಾದ ಗೌರವ ಸಿಗಲಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯ ಣ ಕಾಲದಿಂದ ಕಾಲಕ್ಕೆ ಬದಲಾವಣೆಯಾದ ಭಾಷೆ ಸಾಹಿತ್ಯದಲ್ಲಿ ತರಬೇಕು.ಛಂದಸ್ಸು, ಭಾಷೆ ಬಳಸಬೇಕು ಮಿತಾಕ್ಷರಿ ಕಾನೂನು ಕೃತಿ ಭಾಷೆ ಅರಿಯಬೇಕು.ಕವ ಯತ್ರಿಯವರು ಭಾಷೆಗೆ ಮಹತ್ವ ಕೊಡಬೇಕೆಂದರು.
ಕಲಾ ನಿಕಾಯ ಡೀನ ಡಾ.ವಿಕ್ರಮ ವಿಸಾಜಿ,ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಶಿವಗಂಗಾ ರುಮ್ಮಾ,ಸಂಯೋ ಜಕ ಡಾ.ಬಸವರಾಜ ಕೊಡಗುಂಟಿ ಉಪಸ್ಥಿತಿತರಿದ್ದರು.
ಸಿದ್ದಾರ್ಥ ಚಿಮ್ಮಿದ್ಲಾಯಿ ಅವರ ತಂಡ ಪ್ರಾರ್ಥನೆ ಗೀ ತೆ ಹಾಡಿದರು.ಸ್ವಾಗತ ಪ್ರಾಸ್ತಾವಿಕ ನುಡಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಆಡಿದರು.ಗದ್ದೆಪ್ಪ ನಿರೂಪಿ ಸಿದರು.ಡಾ.ವಿಜಯಕುಮಾರ ಎಚ್.ವಂದಿಸಿದರು.
ಗೋಷ್ಠಿ:
ಶೈಲಜಾ ಉಡಚಣರ ಕಾವ್ಯವನ್ನು ಸಮನ್ವಯದಿಂದ‌ ರಚಿಸಿದವರು ಕಾವ್ಯ ನಿರಂತರ ರಚಿಸಿ ಮಾನವೀಯತೆ ಯ,ಅಕ್ಷರಗಳ ಮೂಲಕ ತಮ್ಮ ಧ್ಯೇಯವಾಗಿಸಿಕೊಂಡ ಕವಯತ್ರಿ ಎಂದು ಡಾ.ಚಿತ್ಕಳಾ ಮಠಪತಿ ನುಡಿದರು.
ಶೈಲಜಾ ಉಡಚಣರ ಗದ್ಯ ಕುರಿತು ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿದರು ಅವರ ಗದ್ಯ ಹದವಾಗಿ ಬರೆದು ವಿಮರ್ಶೆ,ಪರಿಚಯ,ವಿಶ್ಲೇಷಣೆಯ ಮೂಲಕ ಸಾಮಾಜಿಕ ಚಿಂತನೆಯ ಗದ್ಯರಚಿಸಿ.ವಚನ ಸಾಹಿತ್ಯ ದಲ್ಲೂ ಕೃಷಿ ಮಾಡಿದ್ದಾರೆಂದರು.
ವಚನಕಾರರ ದೃಷ್ಟಿಯಲ್ಲಿ ಸ್ತ್ರೀ ಎಂಬ ಸಂಶೋಧನಾ ಗ್ರಂಥದಲ್ಲಿ ವೇದ ಕಾಲದಿಂದ,ಇಂದಿನತನಕ ಮಹಿಳಾ ಚಿತ್ರಣ ನೀಡಿ ಅನುಭಾವ ನೆಲೆಯಲ್ಲಿ ಸಂಶೋಧನೆಯ ಲ್ಲಿ ವಿಶ್ಲೇಷಣೆಗೆ ಒಳಪಡಿಸಿದವರು.ಇದೊಂದು ವಚನ‌ ಸಾಹಿತ್ಯದ ಆಕರ ಗ್ರಂಥ ಬಹು ಕಾಲಕ್ಕೆ ಮಾದರಿ ಎಂದು ಡಾ.ಶೈಲಜಾ ಕೊಪ್ಪರ ನುಡಿದರು. ಡಾ.ಅಪ್ಪಗೇರಿ ಸೋಮಶೇಖರ ಮಾತನಾಡಿ ಪ್ರತಿಭಾನ್ವಿತ ಕವಿಯತ್ರಿಯ ಅಧ್ಯನಯಅಷ್ಟೇ ಅಲ್ಲ, ಓದುವ ರೀತಿ ಅನನ್ಯವೆಂದು ಹೇಳಿದರು.ಅಧ್ಯಕ್ಷತೆಯನ್ನು ಡಾ.ರಾಜಣ್ಣ ತಗ್ಗಿ ವಹಿಸಿ ಶೈಲಜಾ ಅವರ ಕಾವ್ಯ ಓದದೇ ಇರುವುದು ದುರಂತ ಅವರು ನಿರ್ಭೀತಿ,ನಿರ್ಭಿಡೆ ಅವರಲ್ಲಿ ಕಾಣುತ್ತೇವೆಂದರು.
ಸಹಾಯಕ ಕುಲಸಚಿವ ಅಜೀಮ್ ಪಾಷಾ,ಅಪ್ಪಾರಾವ್ ಅಕ್ಕೋಣಿ,ಭೀಮಣ್ಣ ಬೋನಾಳ,ಬುದ್ಧ ಘೋಷ ದೇವೇಂದ್ರ ಹೆಗಡೆ ಕೊಟಗನಹಳ್ಳಿ ರಾಮಯ್ಯ,ಕಲ್ಲಯ್ಯ ಸ್ಥಾವರ ಮಠ,ಭಾಷಾವಿಜ್ಞಾನದ ವಿಭಾಗದ ಮಂಜುಳಾಕ್ಷಿ ಇತರರು ಇದ್ದರು. ಕರಿಲಿಂಗ ನಾಟಿಕರ ನಿರೂಪಿಸಿದರು.ಲಕ್ಮೀ ಕಟ್ಟೀಮನಿ ವಂದಿಸಿದರು.