ಜಾತಿ ಜನಗಣತಿ ಮೂಲಕ ಮತ್ತೊಮ್ಮೆ ವೀರಶೈವ- ಲಿಂಗಾಯತ ಒಡೆಯುವ ಹುನ್ನಾರ: ತೇಲ್ಕೂರ
ವರದಿ ಒಪ್ಪಿದರೆ ಸಮಾಜದ ವಿರೋಧ ಕಟ್ಟಿಟ್ಟ ಬುತ್ತಿ
ಕಲಬುರಗಿ:ಮಾ.01: ಜಾತಿ ಜನಗಣತಿ ಯಾರೂ ಕೇಳಿಲ್ಲ. ಪ್ರಮುಖವಾಗಿ ಸರ್ವೆ ಸರಿಯಾಗಿ ಆಗಿಲ್ಲ. ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ ಅಡಗಿದೆ ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಆಗಿರುವ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಟೀಕಿಸಿದ್ದಾರೆ.
ವರದಿಯನ್ನು ಮನೆ- ಮನೆಗೆ ಭೇಟಿ ನೀಡಿ ರೂಪಿಸಿಲ್ಲ. ನಾಡಿನ ವಿವಿಧ ಮಠಾಧೀಶರೇ ತಮ್ಮ ಮಠಕ್ಕೂ ಬಂದಿಲ್ಲವೆಂದು ಹೇಳಿದ್ದಾರೆ. ಅದರಂತೆ ತಮ್ಮ ಮನೆಗೂ ಬಂದಿಲ್ಲ. ಹೀಗಿದ್ದ ವರದಿ ಹೇಗಾಗುತ್ತದೆ ಎಲ್ಲೋ ಒಂದೇಡೆ ಕುಳಿತು ರೂಪಿಸಿದ ವರದಿ ಇದಾಗಿದೆ ಎಂದು ಆರೋಪಿಸಿದ್ದಾರೆ.
ಜಾತಿ ಜನಗಣತಿ ರೂಪಿಸುವ ಸಂದರ್ಭದಲ್ಲಿ ಒಮ್ಮೇಯೂ ಜಾಗೃತಿ ಮೂಡಿಸಿಲ್ಲ. ಪತ್ರಿಕಾ ಹೇಳಿಕೆಯೂ ನೀಡಿಲ್ಲ.‌ ಒಟ್ಟಾರೆ ಈಗ ಸಲ್ಲಿಕೆಯಾದ ವರದಿ ನಂಬಲಾರ್ಹವಾಗಿದೆ.‌ ಒಟ್ಟಾರೆ ಇದು ಖಂಡನೆಯಾಗಿದೆ.‌ ಪ್ರಮುಖವಾಗಿ ಈ ವರದಿ ಮೂಲಕ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೀರಶೈವ- ಲಿಂಗಾಯತ ಸಮುದಾಯ ಹಾಗೂ ಒಳಪಂಡಗಗಳನ್ನು ಒಡೆದು ಆಳುವ ನೀತಿ ಎತ್ತಿ ತೋರಿಸುತ್ತದೆ ಎಂದು ತೇಲ್ಕೂರ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ 2017-18 ರಲ್ಲೂ ವೀರಶೈವ ಲಿಂಗಾಯತ ಧರ್ಮ ಒಡೆಯಲು ಮುಂದಾಗಿದ್ದಾಗ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಮತ್ತದೇ ನೀತಿ ಅನುಸರಿಸಿದ್ದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ನಿಶ್ಚಿತ.‌ ಆದ್ದರಿಂದ ಸರ್ಕಾರ ವರದಿ ಒಪ್ಪಲು‌ ಮುಂದಾಗಬಾರದು ಎಂದಿದ್ದಾರೆ.
ವರದಿಯಲ್ಲಿ ಯಾವುದೇ ಅಂಕಿ ಸಂಖ್ಯೆಗಳಿಲ್ಲ. ಲೋಕಸಭಾ ಚುನಾವಣೆಯಲ್ಲಿ ಅಶಾಂತಿ ಕದಡುವ ಮೂಲಕ ಲಾಭ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿರುವುದು ಈ ಮೂಲಕ ಕಂಡು ಬರುತ್ತಿದೆ. ಒಂದು ವೇಳೆ ಸಲ್ಲಿಕೆಯಾದ ವರದಿ ಒಪ್ಪಲು ಮುಂದಾಗಿದ್ದಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತ ವಿರೋಧಿ ಧೋರಣೆ ಮತ್ತೆ ಸಾಬೀತಾಗುತ್ತದೆ.‌ ಆದ್ದರಿಂದ ಯಾವುದೇ ಕಾರಣಕ್ಕೂ ವರದಿ ಒಪ್ಪಲು ಮುಂದಾದರೆ ಜನ‌ ಬೀದಿಗಿಳಿದು ರೊಚ್ಚಿಗೆದ್ದರೆ ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ತೇಲ್ಕೂರ ಎಚ್ಚರಿಕೆ ನೀಡಿದ್ದಾರೆ.
ಜಾತಿ ಜನಗಣತಿ ವರದಿಯನ್ನು ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜನಗಣತಿ ಸಂಪೂರ್ಣ ಅವೈಜ್ಞಾನಿಕವಾಗಿದೆ.‌ ಈ ಕುರಿತು ಚರ್ಚೆಗೆ ಕರೆದರೆ ಬಿಜೆಪಿ ಸಿದ್ದವಿದೆ ಎಂದಿದ್ದಾರೆ.