ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಪ್ರಯುಕ್ತ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಲು ಸೂಚನೆ
ಕಲಬುರಗಿ:ಮಾ.01:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ನೀರಿನ ಮೂಲಗಳಾದ ಭೋಸಗಾ ಕೆರೆ ಬತ್ತಿ ಹೋಗಿದ್ದು, ಮಳೆಯಾಗದ ಹಿನ್ನೆಲೆಯಲ್ಲಿ ಭೀಮಾ ಹಾಗೂ ಬೆಣ್ಣೇತೋರಾ ನದಿಗÀಳಲ್ಲಿ ಪ್ರತಿದಿನ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಇದರಿಂದ ನಗರದ ಸಾರ್ವಜನಿಕರಿಗೆ ಬೇಡಿಕೆಗೆ ಅನುಗುಣವಾಗಿ ನೀರನ್ನು ಪೂರೈಸಲು ತೊಂದರೆಯಾಗುತ್ತಿದೆ. ಆದ್ದರಿಂದ ಕಲಬುರಗಿ ನಗರದ ಸಾರ್ವಜನಿಕರು ಈಗಿನಿಂದಲೇ ಮಿತವಾಗಿ ನೀರನ್ನು ಬಳಸಿ, ಅನಾವಶ್ಯಕವಾಗಿ ರಸ್ತೆ ಮತ್ತು ವಾಹನಗಳನ್ನು ತೊಳೆಯಬಾರದು ಹಾಗೂ ನೀರು ಪೋಲಾಗದಂತೆ ನೋಡಿಕೊಳ್ಳಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.