ಕೆ.ಶಿವರಾಮ್ ನಿಧನಕ್ಕೆ ಕಂಬನಿ
ಕಲಬುರಗಿ,ಮಾ.1-ಖ್ಯಾತ ನಟ-ರಾಜಕಾರಣಿ ಮತ್ತು ಕರ್ನಾಟಕ ಕಂಡ ಜನಪ್ರಿಯ ಐಎಎಸ್ ಅಧಿಕಾರಿ (ನಿವೃತ್ತ) ಕೆ.ಶಿವರಾಮ್ ಅವರ ಹಠಾತ್ ನಿಧನಕ್ಕೆ ದಲಿತ ಚಳವಳಿಯ ನಾಯಕರಾದ ರವಿ ಮದನಕರ್ ಮತ್ತು ಶಿವ ಅಷ್ಠಗಿ ಕಂಬನಿ ಮಿಡಿದಿದ್ದಾರೆ.
ಐಎಎಸ್ ಪರೀಕ್ಷೆಯನ್ನು ಪ್ರಥಮ ಬಾರಿಗೆ ಕನ್ನಡದಲ್ಲಿ ಪಾಸ್ ಮಾಡಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಕೆ.ಶಿವರಾಮ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಸಂಖ್ಯಾತ ಯುವ ಜನತೆಗೆ ಸ್ಪೂರ್ತಿಯಾಗಿದ್ದರು. ಐಎಎಸ್ ಅಧಿಕಾರಿಯಾಗಿ ಸಾವಿರಾರು ಬಡವರಿಗೆ, ಶೋಷಿತರ ಬದುಕು ಕಟ್ಟಿಕೊಟ್ಟ ಮಾದರಿ ಅಧಿಕಾರಿ, ಬಡವರ ಮಕ್ಕಳಿಗೆ ಹಲವಾರು ಯೋಜನೆಗಳನ್ನು ರೂಪಿಸಿದ ರೂವಾರಿ, ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ನಟರಾಗಿ ಪ್ರಖ್ಯಾತಿ ಪಡೆದಿದ್ದ ಅವರು ಸಮಾಜದ ಏಳಿಗಾಗಿ ಛಲವಾದಿ ಮಹಾಸಭಾ ಹುಟ್ಟು ಹಾಕಿದ್ದರು. ನಿವೃತ್ತಿ ನಂತರ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದ ಕೆ.ಶಿವರಾಮ ಅವರು, ಬಹುಮುಖ ಪ್ರತಿಭೆ ಎಂದು ಬಣ್ಣಿಸಿರುವ ಅವರು ಇಷ್ಟು ಬೇಗ ಅವರು ಇಹಲೋಕ ತ್ಯಜಿಸಿರುವುದು ನಾಡಿಗೆ ತುಂಬಲಾರದ ನಷ್ಟ ಎಂದು ಕಂಬಿನಿ ಮಿಡಿದಿದ್ದಾರೆ.