ಟೈಟಾಗಿ ನಡೆದ ಪಿಯು ಪರೀಕ್ಷೆ : ಬದಲಿ ವಿದ್ಯಾರ್ಥಿಗಳು ಹೊರಕ್ಕೆ
ಮಾದನಹಿಪ್ಪರಗಿ: ಮಾ.1:ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಂದು ಪಿಯು ಪರಿಕ್ಷೆಗಳು ಆರಂಭಗೊಡಿದ್ದು ಹಿಂದೆಂದು ಕೇಳರಿಯದ ರೀತಿಯಲ್ಲಿ ಫುಲ್‍ಟೈಟಾಗಿ ನಡೆಸಲಾಯಿತು. ಇನ್ನೊಬ್ಬರ ಹೆಸರಲ್ಲಿ ಪರೀಕ್ಷೆ ಬರೆಯಲು ಕೂತವರನ್ನು ಮುಲಾಜಿಲ್ಲದೆ ಹೊರಕ್ಕೆ ಹಾಕಲಾಯಿತು.
ಜಿಲ್ಲೆಯಲ್ಲಿಯೇ ಅತೀಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಗುರುತಿಸಿದ ಪಿಯು ಬೋರ್ಡನವರು ಇಂದಿನ ಪರೀಕ್ಷೆಗೆ ವಿಶೇಷ ಜಾಗೃತ ದಳದವರನ್ನು ಕಳುಹಿಸಿ ಕೊಟ್ಟಿದ್ದರು. ಯಾವೊಬ್ಬ ಪರೀಕ್ಷಾರ್ಥಿಗಳು ನಿಗದಿತ ಸಮಯ ಮುಗಿಯುವವರೆಗೂ ಮಿಸುಕಾಡದೆ ಪರಿಕ್ಷೆ ಬರೆದರು. ಖಾಸಗಿಂi ಪರೀಕ್ಷೆಗೆ ಕೂತ ನಕಲಿ ಅಭ್ಯರ್ಥಿಗಳನ್ನು ಕೇಂದ್ರದ ಮುಖ್ಯ ಅಧೀಕ್ಷಕರು ಹಾಲ್ ಟಿಕೇಟ ಪರೀಶೀಲಿಸಿ ಹೊರಹಾಕಿದ ಘಟನೆ ನಡೆಯಿತು. ಆದರೆ ಕೆಲ ನಕಲಿ ಅಭ್ಯರ್ಥಿಗಳು ಮುಖ್ಯ ಅಧೀಕ್ಷಕರಿಗೆ ಇನ್ನು ಮುಂದೆ ಪರೀಕ್ಷೆಗಳು ಹೀಗೆ ನಡೆಯಬೇಕಲ್ಲ ? ನೋಡೋಣ. ಎಂದು ಅವಾಜ ಹಾಕಿದ್ದುಂಟು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜಾಗೃತ ದಳದವರು ಮತ್ತು ಮುಖ್ಯ ಅಧೀಕ್ಷಕರು ಅಂತವರನ್ನು ಹೊರಹಾಕಿಯೇ ಬಿಟ್ಟರು. ಒಟ್ಟು 295 ಅಭ್ಯರ್ಥಿಗಳಲ್ಲಿ ಇಂದಿನ ಪರೀಕ್ಷೆಗೆ 15 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. 280 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಯಳಸಂಗಿ ಸರಕಾರಿ ಪಿಯು ಕಾಲೇಜಿನಿಂದ ಮಾದನಹಿಪ್ಪರಗಿ ಪರೀಕ್ಷಾ ಕೇಂದ್ರಕ್ಕೆ ಬರಲು ಬಹಳವೇ ಅನಾನುಕೂಲತೆ ಇತ್ತು. ಅತ್ಯಂತ ಕೆಟ್ಟ ರಸ್ತೆ ಹೊಂದಿದ್ದು. ಬೈಕ್‍ಗಳು ಸಹ ಓಡಾಡಲು ಆಗುತ್ತಿರಲ್ಲಿಲ್ಲ. ಯಳಸಂಗಿಯಿಂದ ಮಾದನಹಿಪ್ಪರಗಿಗೆ ಬಸ್ಸಿನ ಸೌಕರ್ಯವೇ ಇರಲಿಲ್ಲ. ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡು ಉದಯವಾಣಿ ಪ್ರತಿನಿಧಿ( ಪರಮೇಶ್ವರ ಭೂಸನೂರ) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗ 3ರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದುದರಿಂದ ಆಳಂದ ಬಸ್ ಘಟಕದಿಂದ ಮಾಡಿಯಾಳ ಯಳಸಂಗಿ ಹಡಲಗಿ ಗ್ರಾಮಗಳ ಪರೀಕ್ಷಾರ್ಥಿಗಳಿಗೆ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಯಿತು. ಈ ವಿಚಾರವಾಗಿ ಯಳಸಂಗಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಮೋತಿಲಾಲ ಚವ್ಹಾಣ, ಬಡ ವಿದ್ಯಾರ್ಥಿಗಳಿಗೆ ಬಹಳವೇ ಅನೂಕೂಲ ಆಗಿದೆ. ಯಳಸಂಗಿ ಪಿಯು ಕಾಲೇಜಿನ 120 ಪರೀಕ್ಷಾರ್ಥಿಗಳು ಬೇರೆ ಗ್ರಾಮಗಳಿಂದ ಬರಲು ತೊಂದರೆಯಾಗುತ್ತಿತ್ತು. ಪರೀಕ್ಷೆ ಬರೆಯಲು ಬಸ್ಸಿನ ಸೌಕರ್ಯ ಕಲ್ಪಿಸಿದ ಜಿಲ್ಲಾಧಿಕಾರಿಗಳಿಗೆ ಮತ್ತು ಆಳಂದ ಘಟಕದ ವ್ಯವಸ್ಥಾಕರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.