ಶ್ರೀದತ್ತಾತ್ರೇಯ ಸ್ವಾಮಿ ಪಲ್ಲಕ್ಕಿ ಉತ್ಸವ: ಬೀದಿಬದಿ ವ್ಯಾಪಾರಿಗಳ ಸಂಘದಿಂದ ಪ್ರಸಾದ ವಿತರಣೆ
ದೇವಲಗಾಣಗಪೂರ, ಮಾ.1- ಭಕ್ತ ದಾಸರ ಸೇವೆ ದೇವನ ಸೇವೆಯಾಗಿದೆ,
ಅನ್ನಸಂತರ್ಪಣೆ ಮತ್ತು ಪ್ರಸಾದ ಸೇವೆಯ ಮೂಲಕ ಗುರು ಶ್ರೀದತ್ತಾತ್ರೇಯ ಸ್ವಾಮಿಗೆ ಸಲ್ಲಿಸುವ ಪೂಜೆಗಳಲ್ಲಿ ಅತಿಶ್ರೇಷ್ಠತಮ ಭಕ್ತಿಯ ಸಮರ್ಪಣೆಯಾಗಿದೆ ಎಂದು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ಜಿಲ್ಲೆಯ ಸುಕ್ಷೇತ್ರ ದೇವಲ ಗಾಣಗಾಪೂರ ಶ್ರೀದತ್ತಾತ್ರೇಯ ದೇವರ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ಗಾಣಗಪೂರದಲ್ಲಿ ಬುಧವಾರ ಮಾ.29ರಂದು ಆಯೋಜಿಸಿದ್ದ ಪ್ರಸಾದ ವಿತರಣೆ ಸೇವೆಗೆ ಚಾಲನೆ ನೀಡಿ ಮಾತನಾಡಿ ಅವರು, ಅಸಂಘಟಿತ ವಲಯಕ್ಕೆ ಸೇರಿದ ಬೀದಿವ್ಯಾಪಾರಿಗಳನ್ನು ಒಂದು ವೇದಿಕೆಯ ಮೂಲಕ ಸಂಘಟಿತರನ್ನಾಗಿ ಮಾಡಿ, ಈ ಸಂಘದ ಮೂಲಕ ಸಮಾಜಿಕ ಕಾರ್ಯಗಳ ಜತೆಯಲ್ಲಿ ಭಕ್ತದಾಸರ ಸೇವೆ ಮಾಡಲು ಗುರುದತ್ತಾತ್ರೇಯ ಸ್ವಾಮಿಯ ಅರ್ಶಿವಾದದ ಅಗತ್ಯವಿದೆ ಎಂದರು.
ಪ್ರತಿವರ್ಷ ಇಲ್ಲಿನ ದತ್ತಾತೆಯ ದೇವರ ಉತ್ಸವಕ್ಕೆ ರಾಜ್ಯ ಸೇರಿದಂತೆ ಅಂತರ ರಾಜ್ಯಗಳಿಂದ ಬಹುಸಂಖ್ಯೆಯಲ್ಲಿ ಬರುವ ಭಕ್ತದಾಸರಿಗೆ ಪ್ರಸಾದ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದ್ದು, ಕಲ್ಯಾಣ ನಾಡಿನದಾಸೋಹ ದಾಸೋಹ ಪರಂಪರೆಯಂತೆ ಭಕ್ತದಾಸರಿಗೆ ಮತ್ತು ವಿಶೇಷವಾಗಿ ಆಸಿದವರಿಗೆ ಅನ್ನನೀಡುವುದು ಸ್ವಯಂ ದೇವರ ಸೇವೆಗೆ ಸಮವಾಗಿದ್ದು, ಈ ಕೆಲಸಕ್ಕೆ ಕೈಜೋಡಿಸುವ ಬೀದಿಬದಿ ವ್ಯಾಪಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶಿವಕುಮಾರ ಬಾಗೋಡಿ, ಡಾ.ವೇದಮೂರ್ತಿ, ಚಂದ್ರಹಾಸ ಚಿದ್ರಿ, ರಾಮಚಂದ್ರ ನಾಟಕಾರ, ಅಮೃತ ಸಿ.ಪಾಟೀಲ ಸಿರನೂರ, ಲಿಂಗರಾಜ, ರೇವಣಸಿದ್ದ ಗೌಡ್ರು, ರೋಹಿತ, ರವಿ ಒಂಟಿ, ಶಿವಾಜಿ, ಶಿವಾನಂದ ಜೆಜೆಇ, ಶಿವಕುಮಾರ ಬಾಗೋಡಿ, ದತ್ತಾ ಕಾಳೆ, ಲಕ್ಷ್ಮೀ ಬಾಬ್ಜಿ, ಮನಿಷ ಮಾಅಲಗಟ, ವೆಂಕಟೇಶ, ಸುರೇಖಾ ತಳವಾರ, ಮುಸ್ತಾಫಾ, ಅಶೋಕ ರೆಡ್ಡಿ, ಮಹೇಶ, ಮಾರುತಿ, ನಾಗು ಮತ್ತು ಬಾಬು ಪರಿಟ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದತ್ಯರು ಭಾಗವಹಿಸಿದ್ದರು.