ಸ್ವಚ್ಛತಾ ಕಾರ್ಯ ಕೈಗೊಂಡ ಪಟ್ಟಣ ಪಂಚಾಯತ ಸಂಜೆವಾಣಿ ವರದಿ ಫಲಶೃತಿ
ಕೊಲ್ಹಾರ, ಮಾ.1- ಪಟ್ಟಣದ ಯುಕೆಪಿ ಕ್ರಾಸ್ ಮೂಲಕ ಹಾದು ಹೋಗಿರುವ ರಾಜ್ಯದ ಪ್ರಮುಖ ಹೆದ್ದಾರಿಯಾದ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಪ್ರತಿನಿತ್ಯ ರಸ್ತೆ ಬದಿಗಳಲ್ಲಿ ಯುಕೆಪಿ ಖಾನಾವಳಿಗಳ ಕಸ ಹಾಗೂ ಕೊಳೆತ ತ್ಯಾಜ್ಯಗಳನ್ನು ಎಸೆಯುತ್ತಿರುವ ಮತ್ತಿ ಇಲ್ಲಿನ ದುಸ್ಥಿತಿಯ ಕುರಿತು “ಸಂಜೆವಾಣಿ” ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯಿಂದ ಎಚ್ಚೆತ್ತ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿಯಲಾಗುತ್ತಿತು ಇದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತ ಸಾಗಿತ್ತು, ಇಲ್ಲಿನ ಸ್ಥಿತಿಗತಿಯ ಕುರಿತು ಸಂಜೆವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಅಧಿಕಾರ ವರ್ಗ ಸ್ಪಂದನೆ ನೀಡಿದೆ.
ಸುಮಾರು ದಿನಗಳಿಂದ ಸೂಕ್ತ ವ್ಯವಸ್ಥೆ ಇಲ್ಲದೆ ತ್ಯಾಜ್ಯಗಳಿಂದ ಸುತ್ತಮುತ್ತಲಿನ ವಾತಾವರಣ ಕೆಟ್ಟ ವಾಸನೆ ಹರಡುತ್ತಿದ್ದ ಕುರಿತು ವಿಶೇಷ ಕಾಳಜಿ ವಹಿಸಿ ಸುದ್ದಿ ಪ್ರಕಟ ಮಾಡಿ ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸಿದ ಸಂಜೆವಾಣಿ ಪತ್ರಿಕೆಗೆ ಯುವ ಮುಖಂಡ ಮಹೇಶ್ ತುಂಬರಮಟ್ಟಿ ಧನ್ಯವಾದಗಳು ತಿಳಿಸಿದ್ದಾರೆ.