ರುದ್ರಭೂಮಿಗಾಗಿ ಔರಾದ್ ಬಂದ್ ಯಶಸ್ವಿ : ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳು ಬಂದ್
ಔರಾದ್ :ಮಾ.1: ಹಿಂದೂಪರ ಮತ್ತು ಕನ್ನಡಪರ ಒಕ್ಕೂಟದ ವತಿಯಿಂದ ರುದ್ರಭೂಮಿ ತೆರವಿಗಾಗಿ ಹಾಗೂ ಹೆಚ್ಚುವರಿಯಾಗಿ 10 ಎಕರೆ ಜಮೀನು ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಗುರುವಾರ ಕರೆ ನೀಡಿದ್ದ ಔರಾದ್ ಪಟ್ಟಣ ಬಂದ್ ಯಶಸ್ವಿಯಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಆಸ್ಪತ್ರೆ, ಔಷಧಿ ಅಂಗಡಿಗಳು, ಬಸ್ ನಿಲ್ದಾಣ, ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಪಟ್ಟಣದ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಅಂಗಡಿ ಮಾಲೀಕರು, ವರ್ತಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್ಗೆ ಸಾತ್ ನೀಡಿದ್ದರು.
ಎಂದಿನಂತೆ ರಾಜ್ಯ ರಸ್ತೆ ಸಾರಿಗೆ ಬಸ್ ಗಳು, ಆಟೋ, ಬೈಕ್ ಹಾಗು ಇನ್ನಿತರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು. ಪಟ್ಟಣದ ಸಾರ್ವಜನಿಕರ ಕಚೇರಿಗಳಲ್ಲಿ ಸಾರ್ವಜನಿಕರಿಲ್ಲದೆ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಪಟ್ಟಣದ ವ್ಯಾಪಾರಿಗಳು ಸ್ವಯಂ ಅಂಗಡಿಗಳು ಮುಚ್ಚುವ ಮೂಲಕ ಮೆರವಣಿಯೊಂದಿಗೆ ತಹಸೀಲ್ ಕಚೇರಿಗೆ ಆಗಮಿಸಿದರು. ಬಳಿಕ ಧರಣಿ ನಿರತ ಪ್ರತಿಭಟನಾಕಾರರಿಗೆ ಬೆಂವಲಿಸಿದರು.
ಪ್ರತಿಭಟನೆ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಈಗಾಗಲೇ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ವ್ಯಕ್ತಿಗೆ ಜಿಲ್ಲಾಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ. ಮಾರ್ಚ್ 2 ರಂದು ಬೆಳಗ್ಗೆ 12 ಗಂಟೆಗೆ ವಿಚಾರಣೆ ನಡೆಯಲಿದೆ. ಅಲ್ಲದೇ ಮುಂಗನಾಳ ರಸ್ತೆಯಲ್ಲಿರುವ ಸರಕಾರದ ಜಮೀನು ಪರಿಶೀಲನೆ ನಡೆಸುವ ಮೂಲಕ ತಹಸೀಲ್ದಾರರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಆದ್ದರಿಂದ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ಹಿಂಪಡೆಯಲು ಮನವಲಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕಾರರು ಅಂತಿಮ ಆದೇಶ ಆಗುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವ ಮಾತಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಅಧಿಕಾರಿಗಳು ಪ್ರತಿಭಟನೆ ಮೊಟಕುಗೊಳಿಸುವಲ್ಲಿ ವಿಫಲರಾದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಸಿಪಿಐ ರಘುವೀರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ನಾಗರಿಕ ಸಂಘರ್ಷ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ, ವ್ಯಾಪಾರಿಗಳ ಒಕ್ಕೂಟ ಸಂಘದ ಅಧ್ಯಕ್ಷ ವಿರೇಶ ಮೀಸೆ, ಸಂದೀಪ ಮೀಸೆ, ಸಂಗಮೇಶ ಗೀರಣೆ, ಸಂಗಮೇಶ ಗಿರಣೆ, ಸಂಜು ನೌಬಾದೆ, ಸಂಜು ನಿರ್ಮಳೆ, ಕಲ್ಲಪ್ಪಾ ದೇಶಮುಖ, ಶರಣಪ್ಪಾ ಪಾಟೀಲ, ರವೀಂದ್ರ ಮೀಸೆ, ಕರವೇ (ನಾರಾಯಣ ಗೌಡಾ ಬಣದ) ತಾಲೂಕು ಅಧ್ಯಕ್ಷ ಅನಿಲ ಹೇಡೆ, ಭಾರತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವಿಶಾಲ ಕೋಳಿ, ರಾಜಕುಮಾರ್ ಎಡವೆ, ವಿಶಾಲ್ ಪಾಟೀಲ್, ಆನಂದ ದ್ಯಾಡೆ, ಶಂಕರ್ ತಿಮ್ಮಾ, ಬಸವರಾಜ ಚ್ಯಾರೆ, ಅನೀಲ ನಿರ್ಮಳೆ, ಸಿದ್ದು ಚ್ಯಾರೆ, ವಿವೇಕ ನಿರ್ಮಳೆ, ರಾಜು ಮುದಾಳೆ, ಸೇರಿದಂತೆ ಅನೇಕರಿದ್ದರು.