ಅಗ್ನಿಶಾಮಕ ದಳದಿಂದಅಗ್ನಿ ಅವಘಡ ಅರಿವು ಮತ್ತು ಅನಾಹುತ ತಡೆಗಟ್ಟುವ ದಿನಾಚರಣೆ
ತಾಳಿಕೋಟೆ:ಮಾ.1: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಗ್ನಿ ಅವಘಡ ಅರಿವು ಮತ್ತು ಅನಾಹುತ ತಡೆಗಟ್ಟುವ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ರವರು ವಹಿಸಿಕೊಂಡಿದ್ದರು.
ಮುಖ್ಯ ಅಥಿತಿಗಳಾಗಿ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಎಚ್.ಎಸ್ ಬೂರನಗೋಳ, ಶಕೀಲಅಹ್ಮದ ಅವಟಿ, ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡವಾದಾಗ ನಾವು ಭಯ ಪಡಬಾರದು ಬದಲಿಗೆ ಅಗ್ನಿ ನಂದಕ ಬಳಸಿಕೊಳ್ಳಬೇಕು ಎಂದುರು ಮತ್ತು ಹೆಚ್ಚಿನ ಅನಾಹುತ ತಪ್ಪಿಸಲು ಹತ್ತಿರದ ಅಗ್ನಿಶಾಮಕ ಠಾಣೆಗೆ ಸಂಪರ್ಕಿಸಬೇಕು ಎಂದು ವಿಧ್ಯಾರ್ಥಿಗಳಿಗೆ ಕೆಲಸ ಸಲಹೆ ಸೂಚನೆಗಳನ್ನು ನೀಡಿದರು.
ಇದೆ ಸಂದರ್ಭದಲ್ಲಿ ಬೆಂಗಳೂರಿನ ಕಾರ್ಲಸ್ಟನ ಎಂಬ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡದಲ್ಲಿ ಮರಣಹೊಂದಿದ ಒಂಭತ್ತು ಜನ ಸಾರ್ವಜನಿಕರಿಗೆ ಹಾಗೂ ಬೇರೆ ಬೇರೆ ರೀತಿಯಲ್ಲಿ ಮೃತಪಟ್ಟವರ ಆತ್ಮ ಶಾಂತಿ ಸಿಗಲಿ ಎಂದು ಎರಡು ನಿಮೀಷಗಳ ಕಾಲ ಮೌನಾಚರಣೆಯನ್ನು ಮಾಡಲಾಯಿತು.
ನಂತರ ಶಾಲಾ ಮೈಧಾನದಲ್ಲಿ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಅಣುಕು ಪ್ರದರ್ಶನವನು ಮಾಡಿದರು.
ಅಗ್ನಿ ಶ್ಯಾಮಕ ಸಿಬ್ಬಂದಿಗಳಾದ ಪಿ.ಐ.ಸಣ್ಣಕ್ಕಿ, ಎಚ್.ಆರ್.ಮಡಿವಾಳರ, ಎಸ್.ಎಚ್. ನರಸಲಗಿ, ದೇವಿಂದ್ರ ರಾಠೋಡ ಮತ್ತು ಮುಖ್ಯಗುರುಗಳಾದ ಸಂತೋಷ ಪವಾರ ಹಾಗೂ ಗುರುಬಳಗದವರಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ರÀಸುಲಸಾ ತುರಕನಗೇರಿ, ಬಸವರಾಜ ಸವದತ್ತಿ, ಸಿದ್ದನಗೌಡ ಮುದ್ನೂರ, ರವಿಕುಮಾರ ಮಲ್ಲಾಬಾದಿ, ಲಕ್ಷ್ಮೀ ಚುಂಚುರ, ಗಿರೀಶ ಎಚ್, ರೂಪಾ ಪಾಟೀಲ, ಮಿನಾಕ್ಷಿ ರಜಪೂತ, ರೂಪಾ ಬಿರಾದಾರ, ಶಿವಲೀಲಾ ಚುಂಚುರ, ಸಂಗೀತಾ ಬಿರಾದಾರ, ಭಾಗ್ಯಶ್ರೀ ಗಿರಿನಿವಾಸ, ಅಂಬೂಜಾ ಹಜೇರಿ, ಜ್ಯೋತಿ ನಾಯ್ಕ, ಜೆಸಮೀನ ಆಲ್ದಾಳ, ವಿದ್ಯಾಶ್ರೀ ಗಿರಿನಿವಾಸ, ಶರಣಗೌಡ ಕಾಚಾಪುರ, ಬಸವರಾಜ ಕೋಣ್ಣುರ, ಜಯಶ್ರೀ ಮಕಾಸಿ, ರೇಷ್ಮಾ ನಧಾಪ್, ಮುಬಿನ ಮುರಾಳ, ಮೇಘಾ ಬಲಕಲ್ಲ, ನಾಗರತ್ನ ಮೈಲೇಶ್ವರ ಹಾಗೂ ವಿದ್ಯಾರ್ಥಿಗಳು ಇದ್ದರು.