ಡಾ. ನಾಸೀರ ಹುಸೇನ್‍ರನ್ನು ಕೂಡಲೆ ವಜಾ ಮಾಡಲು ದೇವೇಂದ್ರ ದೇಸಾಯಿ ಕಲ್ಲೂರ ಒತ್ತಾಯ
ಕಲಬುರಗಿ:ಮಾ.1: ಧರ್ಮದ ಅಫೀಮ್‍ನಲ್ಲಿ ತೇಲುತ್ತಿರುವ ಕೆಲವರಿಗೆ ಸರಿಯಾದ ಪಾಠ ಕಲಿಸಬೇಕಾದರೆ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ಡಾ. ನಾಸೀರ ಹುಸೇನ್‍ರನ್ನು ಕೂಡಲೆ ಅವರ ಸ್ಥಾನದಿಂದ ಪದಚ್ಯುತಿಗೊಳಿಸಲು ಕ್ರಮಕೈಗೋಳ್ಳಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.
ಮನುಷ್ಯನಿಗೆ ಧರ್ಮಬೇಕು ಆದರೆ ಧಮಾರ್ಂಧರಾದವಿಗೆ ಈ ನೆಲದ ಅರಿವಿಲ್ಲದೇ ವರ್ತಿಸುತ್ತಿರುವುದು ನಾಗರಿಕ ಸಮಾಜಕ್ಕೆ ಕಳಂಕವಾಗಿದೆ. ಸಂವಿಧಾನದ ಮುಖಾಂತರ ಆಯ್ಕೆಯಾದ ಜನಪ್ರತಿನಿಧಿಗಳು ಈ ನೆಲದ ಕಾನೂನು ಹಾಗೂ ಸಂವಿಧಾನವನ್ನು ಗೌರವಿಸುವದು ದೇಶದ ಎಲ್ಲಾ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಧರ್ಮದ ಹೆಸರಲ್ಲಿ ಇನ್ನೊಬ್ಬರಿಗೆ ನೋವು ಕೊಡುವುದು ಅಥವಾ ಈ ನೆಲದ ಕಾನೂನನ್ನೆ ಧಿಕ್ಕರಿಸುವುದು ಸರಿಯಲ್ಲ. ಡಾ. ನಾಸೀರ ಹುಸೇನ್‍ರ ಬೆಂಬಲಿಗರು ಶತ್ರು ರಾಷ್ಟ್ರಕ್ಕೆ ಜೈಕಾರ ಹಾಕಿದರೇ ಹೇಗೆ? ಈ ನೆಲದಲ್ಲಿ ಜನ್ಮ ತಾಳಿ, ಈ ನೆಲದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದು ಈ ನೆಲದ ಶ್ರೇಯಸ್ಸಿಗೆ ದುಡಿದ ಅನೇಕರು ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ, ಅಂತಹವರಿಗೆ ಡಾ. ನಾಸೀರ ಹುಸೇನ್‍ರ ಬೆಂಬಲಿಗರೂ ಅವಮಾನ ಮಾಡಿದಂತೆ ಅಲ್ಲವೇ? ಎಂದು ಅವರು ಕೀಡಿ ಕಾರಿದ್ದಾರೆ.
ಚುನಾವಣಾ ಆಯೋಗವು ಈ ಕುಡಲೇ ಡಾ. ನಾಸೀರ ಹುಸೇನ್‍ರನ್ನು ವಜಾ ಮಾಡಿವುದರೊಂದಗೆ ದೇಶ ದ್ರೋಹಿಗಳಿಗೆ ತಕ್ಕ ಸಂದೇಶ ಕಳುಹಿಸಬೇಕು. ಸಂವಿಧಾನ ಹಾಗೂ ಕಾನೂನು ಗೌರವ ನೀಡದ ಪ್ರತಿಯೊಬ್ಬರಿಗೂ ಸ್ಪಷ್ಟವಾಗುವಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಷಕಾರಿ ಜಂತುಗಳು ಬೆಳೆಯಲು ಆರಂಭವಾಗುತ್ತವೆ.
ಯಾವುದೋ ಗಲ್ಲಿಯಲ್ಲಿಯೋ, ಹಳ್ಳಿಯಲ್ಲಿಯೋ ಇಂತಹ ಘಟನೆ ನಡೆದಿದ್ದರೆ, ಅದು ಅಜ್ಞಾನಿಗಳು ಮಾಡಿರುವ ತಪ್ಪು ತಂದು ಹೇಳಿ ಜನರ ಬಾಯಿ ಮುಚ್ಚಿಸಬಹುದಾಗಿದೆ. ಆದರೆ ವಿಧಾನ ಸೌಧದ ಪಡಸಾಲೆಯಲ್ಲಿಯೇ ದೇಶದ್ರೋಹದ ಜೈಕಾರ ಕೂಗಿದ್ದಾರೆ ಎಂದರೆ ಅವರೇನು ಅಜ್ಞಾನಿಗಳಲ್ಲ. ರಾಜ್ಯ ಸಭೆಗೆ ಆಯ್ಕೆಯಾಗಿ ಹೋಗಬೇಕಾದರೆ ಅದು ಬುದ್ದಿಜೀವಿಗಳು ಮಾತ್ರ ಎನ್ನುವ ಮಾತ್ತಿದೆ. ಆದರೆ ಮಂಗಳವಾರ ನಡೆದ ಘಟನೆ ಬುದ್ದಿ ಜೀವಿಗಳಿಗೆ ಮಾತ್ರವಲ್ಲ ಭಾರತ ದೇಶದಕ್ಕೆ ಅವಮಾನವಾಗಿದೆ ಇದು ಎಲ್ಲರೂ ಖಂಡಿಸಲೇ ಬೇಕು.
ಡಾ. ನಾಸೀರ ಹುಸೇನ ಸ್ವತಃ ಹೇಳಿಕೆ ನೀಡಿ ದೇಶ ದ್ರೋಹದ ಜೈಕಾರದ ಶಬ್ದ ನಾನು ಕೇಳಿಯೇ ಇಲ್ಲ ಎಂದು ಮೊಂಡುವಾದ ಮಾಡುವುದು ಎಷ್ಟು ಸರಿ? ಅಲ್ಲಿದ್ದವರೇ ಜೈಕಾರ ಹಾಕುವವರ ಬಾಯಿ ಮುಚ್ಚಲು ಪ್ರಯತ್ನಿಸಿದ್ದಾರೆ, ಅನೇಕ ಮಾಧ್ಯಮಗಳಲ್ಲಿ ಬಿತ್ತರವಾಗಿರುವುದು ಕಾಣಬಹುದಾಗಿದೆ. ಇನ್ನೂ ಆಡಳಿತ ಪಕ್ಷದವರು ವಿಧಿವಿಜ್ಞಾನ ವರದಿ ಬಂದನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವುದು ನಾಚಿಕೆಗೇಡಿತನದ ಪರಮಾವಧಿಯಾಗಿದೆ. ವರದಿ ಬಂದ ಮೇಲೆ ಮತ್ತೆ ಕಾನೂನು ಕ್ರಮ, ನಿಯಮಾವಳಿ ಅದು ಇದು ಎಂದು ಹೇಳಿ ದೇಶದ್ರೋಹಿಗಳನ್ನು ಬಜಾವ ಮಾಡುವ ಎಲ್ಲಾ ಹುನ್ನಾರ ನಡೆಯುತ್ತದೆ. ಮಾಧ್ಯಮವದವರು ಪ್ರಶ್ನೆಗಳನ್ನು ಕೇಳಲು ಮುಂದಾದರೆ ಅವರನ್ನು ಸುದ್ದಿಗೋಷ್ಠಿಯಿಂದ ಹೊರ ನಡೆಯಲು ಹೇಳಿರುವದು ಅಕ್ಷಮ್ಯ ಅಪರಾಧವಾಗಿದೆ. ವಿಧಿವಿಜ್ಞಾನ ವರದಿ ಬರುವವರೆಗೂ ಕಾಯುವುದು ಸರಿಯಲ್ಲ, ತಕ್ಷಣ ಡಾ. ನಾಸೀರ ಹುಸೇನರನ್ನು ಅಮಾನತ್ತಿನಲ್ಲಿ ಇಡಬೇಕು ಎಂದು ದೇವೇಂದ್ರ ದೇಸಾಯಿ ಕಲ್ಲೂರ ಒತ್ತಾಯಿಸಿದ್ದಾರೆ.