ವಿಜ್ಞಾನದಿಂದ ಅಜ್ಞಾನ ದೂರ
ಬಾದಾಮಿ,ಮಾ.1: ಭೂಮಿಯಲ್ಲಿನ ಪ್ರತಿಯೊಬ್ಬರ ಜೀವನದಲ್ಲಿ ವಿಜ್ಞಾನ ಮುಖ್ಯವಾಗಿದೆ. ಕೆಲವೊಮ್ಮೆ ನಮಗೆ ಅರಿವಿಲ್ಲದೇ ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನವನ್ನು ಬಳಸುತ್ತೇವೆ. ವಿಜ್ಞಾನವು ಜನಸಾಮಾನ್ಯರ ಅಜ್ಞಾನ ದೂರವಾಗಿಸುತ್ತದೆ. ವಿಜ್ಞಾನಿಗಳು ಸತತ ಪರೀಶ್ರಮ, ತಾಳ್ಮೆಯಿಂದ ಸಂಶೋಧನೆ ಕೈಗೊಂಡು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪರಿಸರ ಪ್ರೇಮಿ, ನಿವೃತ್ತ ಉಪನ್ಯಾಸಕ ಎಸ್.ಎಚ್. ವಾಸನ ಹೇಳಿದರು.
ಅವರು ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ್ಯ, ಕ್ರೀಯಾಶೀಲತೆ ಬೆಳೆಸುವುದಲ್ಲದೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತದೆ. ಮಕ್ಕಳು ಇಂತಹ ಪ್ರದರ್ಶನಗಳಲ್ಲಿ ಭಾಗವಹಿಸಬೇಕು ಎಂದರು.
ವಿಜ್ಞಾನ ಬರಹಗಾರ ಎಲ್.ಸಿ. ಕುಲಕರ್ಣಿ ಮಾತನಾಡಿ, ವಿಜ್ಞಾನಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಪ್ರಾಚೀನ ವಿಜ್ಞಾನಿಗಳಾದ ಭಾಸ್ಕರಾಚಾರ್ಯ, ಆರ್ಯಭಟ, ಕಣಾದ ಅವರಂತಹ ಪ್ರಾಚೀನ ವಿಜ್ಞಾನಿಗಳಿಂದ ಹಿಡಿದು ಸಿ.ವಿ.ರಾಮನ್, ಎಪಿಜೆ ಅಬ್ದುಲ್‍ಕಲಾಮ್, ಸತ್ಯಂದ್ರನಾಥ ಭೋಸ್, ಹೋಮಿಜಹಂಗೀರಬಾಬಾ, ಶ್ರೀನಿವಾಸ ರಾಮಾನುಜನ್, ಜಗದೀಶಚಂದ್ರ ಬೋಸ್ ಅವರಂತ ವಿಜ್ಞಾನಿಗಳನ್ನು ಭಾರತ ಜಗತ್ತಿಗೆ ನೀಡಿದೆ. ನೋಬಲ್ ಪ್ರಶಸ್ತಿ ಪುರಸ್ಕøತ ವಿಜ್ಞಾನಿ ಸಿ.ವಿ. ರಾಮನ್ ಅವರ ಸಂಶೋಧನೆಯ ದಿನದ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಎಸ್‍ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಪ್ರಾಚಾರ್ಯ ಶಂಕರರಾವ ಕುಲಕರ್ಣಿ, ರಮೇಶ ಕತ್ತಿಕೈ, ರಮೇಶ ಹಂಜಿ, ಕೀರ್ತಿ ಬಡಿಗೇರ, ಎಸ್.ಎನ್. ಸಂಕನೂರ, ಭಾಗ್ಯಲಕ್ಷ್ಮಿ ಟಿ.ಎಚ್. ಬಸವರಾಜ ಸಿಂದಗಿಮಠ, ಸಂಗಮೇಶ ಉಳ್ಳಾಗಡ್ಡಿ, ಶ್ರೀನಿವಾಸ ಈಳಗೇರ, ಬಸವರಾಜ ಚಿಕ್ಕಣ್ಣವರ, ಕೇಶವ ರಘುವೀರ ಅಶೋಕ ಪೂಜಾರಿ, ದುರ್ಗಾ ಮುಂಡರಗಿ, ದಾನಮ್ಮ ಬಂಡಿಗಣಿ, ಹನಮಂತ ಬಿ ಮತ್ತಿತರ ಇದ್ದರು. ವಿದ್ಯಾರ್ಥಿಗಳ ವಿವಿಧ ವಿಜ್ಞಾನ ಚಟುವಟಿಕೆಗಳು ಎಲ್ಲರ ಮನಸೂರೆಗೊಂಡವು.