ರಸ್ತೆಗಳಲ್ಲಿನ ಸಿಡಿ ದುರಸ್ತಿಗೆ ಆಗ್ರಹ
ಬಾದಾಮಿ,ಮಾ.1: ಬಾದಾಮಿ ಪಟ್ಟಣದ ಎಲ್ಲಾ ವಾರ್ಡಿನಲ್ಲಿ ಸಿಡಿಗಳು ಬಾಯ್ತೆರೆದ ಕಾರಣ ಅನಾಹುತಕ್ಕೆ ಆಹ್ವಾನಿಸುವಂತಾಗಿ ಜನರಲ್ಲಿ ಆತಂಕ ಮೂಡಿಸಿದೆ.
ನಗರದ ವಾರ್ಡ ನಂಬರ್ 17 ರಲ್ಲಿ ರಡ್ಡಿ ಮತ್ತು ಜವಳಿ ಅವರ ಮನೆಮುಂದಿನ ಸಿಡಿ ಬಾಯ್ತೆರೆದು ಅನಾಹುತಕ್ಕೆ ಕಾದಿದೆ. ಈ ಬಗ್ಗೆ ವಾರ್ಡ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ವಾರ್ಡಿನಲ್ಲಿ ಇತ್ತೀಚೆಗೆ ಬಹು ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮಾಡಿದ 15ದಿನಗಳಲ್ಲಿ ಕಾಂಕ್ರೀಟ್ ನಲ್ಲಿ ಕಡಿ ಕಿತ್ತು ಹೋಗುತ್ತಿವೆ. ಕೆಲಸ ಪ್ರಾಮಾಣಿಕವಾಗಿ ನಡೆದರೂ ಕಳಪೆಯ ನೋಟ ಕಣ್ಣಿಗೆ ಕಾಣುತ್ತಿದೆ. ಈ ಕುರಿತು ಸ್ಥಳೀಯ ಮುಖ್ಯಾಧಿಕಾರಿ ಅವರಿಗೆ ತಿಳಿಸಿದರೂ ಏನೂ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಾದಾಮಿ ಇತರೆಡೆಯ ಸಿಸಿ ಮತ್ತು ಇತರೆ ಕಾಮಗಾರಿಗಳೂ ಸರಿಯಾಗಿಲ್ಲ ಎಂದು ಸಾರ್ವಜನಿಕ ರಿಂದ ಕೇಳಿಬರುತ್ತಿದೆ.