ರಾಯಲ್ ಓಕ್ ಮಳಿಗೆಗೆ ಬೀಗ ಜಡಿದ ಪಾಲಿಕೆ ಅಧಿಕಾರಿಗಳು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.1: ಇಲ್ಲಿನ ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರಿಗೆ ಬಾಕಿ ಕಟ್ಟದ ಕಾರಣ ಇಂದು ನಗರದ ರಿಲಯನ್ಸ್   ಮಳಿಗೆ ಪಕ್ಕದಲ್ಲಿರುವ ರಾಯಲ್ ಓಕ್ ಮಳಿಗೆಗೆ ಬೀಗ ಜಡಿದಿದ್ದಾರೆ.‌
ಈ ಬೃಹತ್ ಕಟ್ಟಡವನ್ನು ಕಟ್ಟಿ ರಿಲಯನ್ಸ್, ಸ್ಟೈಲ್ ಯೂನಿಯನ್ ಮತ್ತು ರಾಯಲ್ ಓಕ್ ಮಳಿಗೆ ತೆರೆಯಲಾಗಿತ್ತು.
ಈ ಕಟ್ಟಡ ಕಟ್ಟಿ ಹಲವು ವರ್ಷಗಳಾಗಿದ್ದರೂ ನಗರ ಪಾಲಿಕೆಗೆ ಆಸ್ತಿ ತೆರಿಗೆಯನ್ನು ಸರಿಯಾಗಿ ಕಟ್ಟದೆ. ಅಂದಾಜು 47 ಲಕ್ಷ ರೂ ಬಾಕಿ ಉಳಿಸಿಕೊಳ್ಳಲಾಗಿತ್ತು. ಅದಕ್ಕಾಗಿ ಬೀಗ ಜಡಿಯಲಾಗಿದೆ.
ಇದು ಬೃಹತ್ ಕಟ್ಟಡಗಳ ಆಸ್ತಿ ತೆರಿಗೆಯ ಬಾಕಿ ವಸೂಲಿಯ  ಎರಡನೆ ಆಪರೇಷನ್ ಆಗಿದೆ.