ಭಾನುವಾರ ಹೊಸಪೇಟೆಯಲ್ಲಿ 1008ನೆಯ ವಾರದ ಸಹಸ್ರಕಂಠ ಸಾಮೂಹಿಕ ‘ವಿಷ್ಣು ಸಹಸ್ರನಾಮ ಪಾರಾಯಣ.
ಸಂಜೆವಾಣಿ ವಾರ್ತೆ
ಹೊಸಪೇಟೆ :ಮಾ,1- ಹೊಸಪೇಟೆಯ ಶ್ರೀಕೃಷ್ಣಮಠದಲ್ಲಿ 1008ನೆಯ ವಾರದ ಸಹಸ್ರಕಂಡ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಯು.ರಾಘವೇಂದ್ರರಾವ್ ತಿಳಿಸಿದರು.
ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ವಾಮನತೀರ್ಥ ಪರಂಪರೆಯ ಶ್ರೀ ಶೀರೂರು ಮಠದ ಜಗದ್ಗುರು ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು. ಭಾವೀ ಪರ್ಯಾಯ ಪೀಠದ ಪೂಜ್ಯರು ಉಡುಪಿ ಭಾಗವಹಿಸಲಿದ್ದಾರೆ.
ಮುಖ್ಯ ಪ್ರವಚನಕಾರರಾಗಿ ಬೆಂಗಳೂರಿನ ಪ್ರವಚನ ಪಂಡಿತರಾದ ವಿದ್ವಾನ್  ಎಲ್.ಎಸ್. ಬ್ರಹ್ಮಣ್ಯತೀರ್ಥಾಚಾರರು
2004ರಲ್ಲಿ ಗಾಂಧಿವಾದಿ ಕೆ. ನಾರಾಯಣಭಟ್ಟ ಹಾಗೂ  ರಘುಪತಿ ಬೈಲೂರು ಇವರ ನೇತೃತ್ವದಲ್ಲಿ ಪುರೋಹಿತ ವಿದ್ವಾನ್  ಕೇಶವಾಚಾರ್ಯರ ಮನೆಯಲ್ಲಿ ಪ್ರಾರಂಭವಾದ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಕ್ಕೆ ಇಂದು 20 ವರ್ಷ ಸಂದಿದೆ. ಅಂದು ಕೆಲವೇ ಸದಸ್ಯರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮೌನಕ್ರಾಂತಿಯಿಂದಾಗಿ ನಾಡಿನ ಉದ್ದಗಲಗಳಲ್ಲಿ ಪ್ರಸಿದ್ದಿ ಪಡೆದಿದೆ. ಪ್ರತಿವಾರವೂ ತಪ್ಪದೆ ನಡೆಯುವ ಈ ಪಾರಾಯಣ ಕಾರ್ಯಕ್ರಮ ಈ ಹಿಂದೆ ಈಗಾಗಲೇ ಪೂಜ್ಯಶ್ರೀ ವಿಶ್ವೇಶ್ವರ ಶ್ರೀಪಾದರು, ಶ್ರೀ ಪೇಜಾವರ ಮಠ, ಉಡುಪಿ ಹಾಗೂ ಶ್ರೀ ಕುಕ್ಕೆ ಸುಬ್ರಮಣ್ಯಮಠದ ಶ್ರೀಪಾದರ ನೇತೃತ್ವದಲ್ಲಿ ಎರಡು ಸಲ ಸಹಸ್ರಕಂಠ ಸಾಮೂಹಿಕ ಪಾರಾಯಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಮ್ಮ ಸಂಸ್ಥೆ ನಡೆಸಿದೆ ಎಂದರು. ಅಲ್ಲದೆ ಪ್ರತಿ ವರ್ಷ ಜಾಗತಿಕಮಟ್ಟದ ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಈ ಸಂಸ್ಥೆ ಪಾಲ್ಗೊಂಡಿರುತ್ತಾ ಬಂದಿದೆ. ಕೋರೋನಾದಂತಹ ಭೀಕರ ಮಹಾಮಾರಿ ಕಾಯಿಲೆಯ ಸಂಕಷ್ಟದ ವಾತಾವರಣದಲ್ಲಿಯೂ ಸಹ ಆನ್‌ಲೈನ್ ಮೂಲಕ ಪಾರಾಯಣ ಕಾರ್ಯಕ್ರಮವನ್ನು ನಡೆಸಿ, ವಿಶ್ವಮಾನವ ಕಲ್ಯಾಣ, ಶಾಂತಿ ಹಾಗೂ ಆರೋಗ್ಯವನ್ನು ಬಯಸಿ ಪ್ರಾರ್ಥನೆ ಸಲ್ಲಿಸಿರುವುದು ನಮ್ಮ ಸಂಸ್ಥೆಯ ಹೆಮ್ಮೆಯ ವಿಚಾರ ಎಂದರು.
ಈ ವರ್ಷದ ಸಂಭ್ರಮದ ಪರ್ವಕಾಲದಲ್ಲಿ 1008ನೆಯ ವಾರದ ಕಾರ್ಯಕ್ರಮದಲ್ಲಿ ಮನಃ ಸಹಸ್ರಕಂಠ ವಿಷ್ಣು ಸಹಸ್ರನಾಮ ಪಾರಾಯಣವನ್ನು ಸಂಸ್ಥೆಯ ಅಧ್ಯಕ್ಷರಾದ ಯು.ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿಆಯೋಜಿಸಿದೆ ಎಂದರು.
ಗೋಷ್ಠಿಯಲ್ಲಿ ಸಂಸ್ಥೆಯ ಶ್ರೀಪತಿ ಆಚಾರ್ಯ, ಆರ್.ಪಿ.ಗುರುರಾಜ್, ವಾದಿರಾಜ್, ನರಸಿಂಹ ಆಚಾರ್ಯ, ರಾಮಮೂರ್ತಿ ಆಚಾರ್ಯ ಪಾಲ್ಗೊಂಡಿದ್ದರು.