ಪಿಜಿಯೋ ಥೆರಪಿ ಪರೀಕ್ಷೆ ; ಸ್ಪೂರ್ತಿ ಕಾಲೇಜಿನ ವಿದ್ಯಾರ್ಥಿಗೆ ಚಿನ್ನದ ಪದಕ
ಆನೇಕಲ್.ಮಾ.೧-ತಾಲ್ಲೂಕಿನ ಮರಸೂರು ಗೇಟ್ ಬಳಿಯಿರುವ ಸ್ಪೂರ್ತಿ ವಿದ್ಯಾ ಸಂಸ್ಥೆಯಲ್ಲಿ ೪ ವರ್ಷಗಳ ಕೋರ್ಸ್ ಆದ ಪಿಜಿಯೋಥೆರಪಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಶ್ರೀ ಜಯ ಎಂಬ ವಿದ್ಯಾರ್ಥಿಯು ಪರೀಕ್ಷೆಗಳಲ್ಲಿ ಒಟ್ಟು ಸರಾಸರಿ ಶೇ ೮೦.೦೪ ರಷ್ಠು ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುವ ಮೂಲಕ ಚಿನ್ನದ ಪಧಕವನ್ನು ಪಡೆದು ಕೊಂಡಿದ್ದಾರೆ. ಇನ್ನು ನೆನ್ನೆ ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ೨೬ ನೇ ಘಟಿಕೋತ್ಸವದಲ್ಲಿ ಕುಮಾರಿ ಶ್ರೀ ಜಯ ವಿದ್ಯಾರ್ಥಿನಿಗೆ ರಾಜ್ಯಪಾಲರು ಚಿನ್ನದ ಪಧಕ ಮತ್ತು ಪಾರಿತೋಶಕವನ್ನು ನೀಡಿ ಗೌರವಿಸಿದರು.
ಇಂದು ಸ್ಪೂರ್ತಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಪೂರ್ತಿಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪಿ.ಗೋಪಾಲ್ ರೆಡ್ಡಿರವರು ಮತ್ತು ಅಧ್ಯಾಪಕವರ್ಗ ಕುಮಾರಿ ಶ್ರೀ ಜಯ ಎಂಬ ವಿದ್ಯಾರ್ಥಿಗೆ ಗೌರವ ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನಿಖಿಲ್ ರಾಣಾ, ಸಿಂಧು, ಮಿಕೆಲ್, ಶ್ವೇತಾ, ಸುರಭಿ, ಸಿಮ್ ಪ್ಲೇ, ಡಾ|| ಅಶ್ವಿನಿ, ಡಾ|| ಮಾನಸಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.