ಔರಾದ ಅಮರೇಶ್ವರರ ಜಾತ್ರೆಗೆ ವಿದ್ಯುಕ್ತ ಚಾಲನೆ : ಜಾತ್ರಾ ಮಹೋತ್ಸವ ಪ್ರಚಾರಾರ್ಥ ಭಿತ್ತಿ ಪತ್ರ ಬಿಡುಗಡೆ
ಸಂಜೆವಾಣಿ ವಾರ್ತೆ
ಔರಾದ :ಮಾ.1: ನಾಡಿನ ಸುಪ್ರಸಿದ್ಧ ಔರಾದ ಸುಕ್ಷೆ?ತ್ರ ಉದ್ಭವಲಿಂಗ ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಆವರಣದಲ್ಲಿ ರಥವನ್ನು ಜೋಡಿಸಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಗುರುವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಐತಿಹಾಸಿಕ ಶ್ರೀ ಅಮರೇಶ್ವರ ಜಾತ್ರೆಯು ಪ್ರತಿ ವರ್ಷದಂತೆ ಅರ್ಥಪೂರ್ಣವಾಗಿ ಆಚರಿಸಲಾಗುವುದು, ಸತತವಾಗಿ ವಾರದ ಕಾಲ ನಡೆಯುವ ಐತಿಹಾಸಿಕ ಜಾತ್ರೆಗೆ ನೆರೆಯ ಮಹಾರಾಷ್ಟ್ರ ತೆಲಂಗಾಣ ರಾಜ್ಯದ ಭಕ್ತರು ಆಗಮಿಸುತ್ತಾರೆ ಮಾರ್ಚ್ 05 ರಿಂದ ಮಾರ್ಚ್ 09ರ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಯಶಸ್ವಿಗೆ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಮುಖಂಡರು ಮತ್ತು ಎಲ್ಲಾ ಅಧಿಕಾರಿ ವರ್ಗದವರು ಸಹಕರಿಸಬೇಕು ತಸೀಲ್ದಾರ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಮಾರ್ಚ್05 ರಿಂದ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಜನೆ, ಕೀರ್ತನೆಗಳು ನಡೆಯಲಿವೆ. ಮಾ.05 ಪಾದಪೂಜೆ, 06 ರಂದು ಭಜನೆ ಕಿರ್ತನೆ, 07 ರಂದು ಸಂಗೀತ ದರ್ಬಾರ, 08 ರಂದು ಅಗ್ನಿಪೂಜೆ, 09 ರಂದು ರಥೋತ್ಸವ ಜರುಗಲಿದೆ.
ಈ ಸಂಧರ್ಭದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಅಮರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ, ಯುವ ಸಮೂಹ ಜಾತ್ರೆಯಲ್ಲಿ ಪಾಲ್ಗೊಂಡು ಅಹಿತಕರ ಘಟನೆ ನಡೆಯದಂತೆ ಹಾಗೂ ನೆರೆಯ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ಭಕ್ತರು ಪಾಲ್ಗೊಳ್ಳುತ್ತಾರೆ, ಯುವಕರು ಜಾತ್ರೆಯಲ್ಲಿ ತನು ಮನದಿಂದ ಸಹಕರಿಸಿ ಜಾತ್ರಾ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಪ್ರಚಾರಾರ್ಥ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅರ್ಚಕ ರವಿ ಸ್ವಾಮಿ, ಸುನಿಲ ಕುಮಾರ್ ದೇಶಮುಖ, ಶರಣಪ್ಪ ಪಂಚಾಕ್ಷರಿ, ಬಸವರಾಜ ಚ್ಯಾರೆ, ಅಮರೇಶ ಮಸ್ಕಲೆ, ಮೋಹನ ಕೆದಾರೆ, ಸೂರ್ಯಕಾಂತ ಚ್ಯಾರೆ, ಶಿದ್ರಾಮ ಹಳೆಂಬುರೆ, ಸಂತೋಷ ಕೋಳಿ, ಸತೀಶ್ ಜ್ಯಾಂತೆ, ಪ್ರಭುರಾವ ಪಾಂಚಾಳ, ಸಿದ್ರಾಮ ಬಾವಗೆ, ಆನಂದ ಪಾಂಚಾಳ, ಈಶ್ವರ ಚಿಟ್ಮೆ, ಶಿವಾನಂದ ಕನಕೆ, ಶ್ರೀಪಾದ ಪಂಚಾಕ್ಷರಿ, ಸಂದೀಪ ಪಾಟೀಲ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.